ಕನಕಪುರ: ಕೆಆರ್‌ಎಸ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಹರಿಸುತ್ತಿರುವುದರಿಂದ ತಾಲೂಕಿನ ಸಂಗಮ ದಡದಲ್ಲಿರುವ ಬೊಮ್ಮಸಂದ್ರ ಶಾಂತಿಧಾಮ ಜಂಗಲ್ ಲಾಡ್ಜ್ ನೀರಿನಿಂದ ಅವೃತವಾಗಿವೆ.
ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಜಂಗಲ್ ಲಾಡ್ಜ್‌ಗೆ ಹೋಗುವ ರಸ್ತೆಯಲ್ಲಿಯ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಸಂಪರ್ಕ ಕಡಿತಗೊಂಡಿದೆ.
ಈ ಪ್ರದೇಶದ ಜನರು ಅಲ್ಲಿಂದ ಆಚೆ ಬರಲಾಗಲು ಆಗುತ್ತಿಲ್ಲ. ಜಲದಿಗ್ಬಂಧನದಿಂದಾಗಿ ಗ್ರಾಮದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.
ತಾಲ್ಲೂಕು ಆಡಳಿತ ಇಲ್ಲಿಗೆ ಭೇಟಿ ಕೊಟ್ಟು ಜನರಿಗೆ ಆಹಾರ ಮತ್ತು ಮತ್ತು ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸ ಮಾಡಬೇಕು. ಜನ, ಜಾನವಾರು ಗ್ರಾಮದಿಂದ ಹೊರಗಡೆ ಬರಲು ಅಗತ್ಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಂಗಮ ದಡದಲ್ಲಿರುವ ಶಾಂತಿಧಾಮ ಜಂಗಲ್ ಲಾಡ್ಜ್ ಮತ್ತು ಬೊಮ್ಮಸಂದ್ರ ಗ್ರಾಮಕ್ಕೆ ಸೇತುವೆ ಇಲ್ಲದಿರುವುದೇ ಎಲ್ಲಾ ಸಮಸ್ಯೆಗಳಿಗೂ ಕಾರಣವಾಗಿದೆ ಎಂದು ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಏಳಗಳ್ಳಿ ರವಿ ಆರೋಪ ಮಾಡಿದರು.
ನದಿಯಲ್ಲಿ ನೀರಿನ ಹರಿವು ಹೆಚ್ಚಾದಂತೆ ಹಳ್ಳಗಳಲ್ಲಿ 15 ರಿಂದ 20 ಅಡಿಯಷ್ಟು ನೀರು ಸಂಗ್ರಹವಾಗುತ್ತೆ. ಇದರಿಂದ ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ಸೇತುವೆ ನಿರ್ಮಿಸುವಂತೆ ಜನರು ಒತ್ತಾಯಿಸಿದರೂ ಅರಣ್ಯ ಇಲಾಖೆ ಅನುಮತಿ ಸಿಗದ ಕಾರಣ ಸೇತುವೆ ಕನಸಾಗಿಯೇ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.