ADVERTISEMENT

ಚಾಮುಂಡೇಶ್ವರಿ ದಸರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:37 IST
Last Updated 17 ಅಕ್ಟೋಬರ್ 2021, 4:37 IST
ಹಾರೋಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದ ದಸರಾ ಮಹೋತ್ಸವದಲ್ಲಿ ಚಾಮುಂಡೇಶ್ವರಿ ದೇವಿಯ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು
ಹಾರೋಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದ ದಸರಾ ಮಹೋತ್ಸವದಲ್ಲಿ ಚಾಮುಂಡೇಶ್ವರಿ ದೇವಿಯ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು   

ಕನಕಪುರ: ತಾಲ್ಲೂಕಿನ ಹಾರೋಹಳ್ಳಿಯ ಶಕ್ತಿ ದೇವತೆಯಾದ ಚಾಮುಂಡೇಶ್ವರಿ ಅಮ್ಮನವರ ದಸರಾ ಮಹೋತ್ಸವ ಶುಕ್ರವಾರ ರಾತ್ರಿ ಪಲ್ಲಕ್ಕಿ ಉತ್ಸವದೊಂದಿಗೆ ಸಂಪನ್ನಗೊಂಡಿತು.

ದಸರಾ ಆಚರಣಾ ಸಮಿತಿಯು ಕಳೆದ ಐದು ವರ್ಷಗಳ ಹಿಂದೆ ಗ್ರಾಮದಲ್ಲಿ ಮೈಸೂರು ದಸರಾ ರೀತಿಯಲ್ಲೇ ಚಾಮುಂಡೇಶ್ವರಿ ಅಮ್ಮನವರ ನವರಾತ್ರಿ ಉತ್ಸವ ಮತ್ತು ದಸರಾ ಮಹೋತ್ಸವ ಆಚರಣೆ ಮಾಡಬೇಕೆಂದು ತೀರ್ಮಾನಿಸಿ ಚಾಲನೆ ನೀಡಿತ್ತು.

ಅಂದಿನಿಂದ ಇಲ್ಲಿಯವರೆಗೂ ನವರಾತ್ರಿ ಉತ್ಸವ, ವಿಜಯ ದಶಮಿಯಂದು ದಸರಾ ಮಹೋತ್ಸವ ನಡೆದುಕೊಂಡು ಬಂದಿದ್ದು ಕೋವಿಡ್‌ ಕಾರಣದಿಂದ ಈ ಬಾರಿ ಸರಳ ಆಚರಣೆ ಮಾಡಲಾಯಿತು.

ADVERTISEMENT

ಒಂಬತ್ತು ದಿನವೂ ಒಂದೊಂದು ದುರ್ಗಿ ಅವತಾರವನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ ದಸರಾ ಆಚರಣಾ ಸಮಿತಿಯವರು ಅಂತಿಮವಾಗಿ ಚಾಮುಂಡೇಶ್ವರಿ ಅಮ್ಮನವರನ್ನು ಮುತ್ತಿನ ಪಲ್ಲಕ್ಕಿಯಲ್ಲಿಟ್ಟು ನವದುರ್ಗೆಯರೊಂದಿಗೆ ಕಲಾ ತಂಡಗಳ ಜತೆಯಲ್ಲಿ ಮೆರವಣಿಗೆ ಮಾಡಿದರು.

ಅರುಣಾಚಲೇಶ್ವರ ದೇವಾಲಯ ದಿಂದ ಹೊರಟ ಮೆರವಣಿಗೆಯು ಬೆಂಗಳೂರು ರಸ್ತೆಯ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಆವರಣ ದಲ್ಲಿ ಕೊನೆಗೊಂಡಿತು. ದೇವಾಲಯದ ಆವರಣದಲ್ಲಿ ಬನ್ನಿಪೂಜೆ ನೆರವೇರಿಸಲಾಯಿತು. ನಂತರ ಅಲ್ಲಿಂದ ಗಾಣಾಳ್‌ ಬಳಿಯಿರುವ ಕೆರೆಯಲ್ಲಿ ನವದುರ್ಗೆಯರ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ದಸರಾ ಆಚರಣಾ ಸಮಿತಿ ಅಧ್ಯಕ್ಷ ಎಂ. ಗೌತಮ್‌ ಗೌಡ, ಸಂಚಾಲಕ ಎಂ. ಮಲ್ಲಪ್ಪ, ಗೌರವಾಧ್ಯಕ್ಷ ಪೊಲೀಸ್‌ ಮುನಿಯಪ್ಪ, ಸಹಸಂಚಾಲಕ ಎಚ್‌.ಎಸ್‌. ಮುರಳೀಧರ್‌, ಕಾರ್ಯಾಧ್ಯಕ್ಷ ಶಿವಲಾಲ್‌ ಜಿ, ಉಪಾಧ್ಯಕ್ಷ ಎಂ. ವಿಜಯ ಕುಮಾರ್‌, ಕಾರ್ಯದರ್ಶಿ ವಕೀಲ ಚಂದ್ರಶೇಖರ್‌, ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಸಾವಿತ್ರಿರಾವ್‌‌, ಸಹ ಕಾರ್ಯದರ್ಶಿ ರಾಘವೇಂದ್ರ, ಸಾಂಸ್ಕೃತಿಕ ಸಮಿತಿ ಉಪಾಧ್ಯಕ್ಷ ಮಹಮ್ಮದ್‌ ಯಾಕೂಬ್‌ ಪಾಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.