
ಪ್ರಜಾವಾಣಿ ವಾರ್ತೆ
ಚನ್ನಪಟ್ಟಣ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚನ್ನಪಟ್ಟಣ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಡಿ.ಎಂ.ಮಂಜುನಾಥ್ ಪುನರ್ ಆಯ್ಕೆಯಾಗಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಿ.ಎಂ.ಮಂಜುನಾಥ್ ಅವರು ಟಿ.ಎಸ್.ಅಭಿಲಾಷ್ ಅವರನ್ನು ಪರಾಭವಗೊಳಿಸಿದರು.
ಪ್ರಧಾನ ಕಾರ್ಯದರ್ಶಿಯಾಗಿ ಅಕ್ಕೂರು ರಮೇಶ್, ಉಪಾಧ್ಯಕ್ಷ ಎಸ್.ಅರ್ಕೇಶ್ ಮತ್ತು ಬಿ.ಪಿ.ಚಿನ್ನಗಿರಿಗೌಡ, ಖಜಾಂಚಿ ಮೆಂಗಳ್ಳಿ ಮಹೇಶ್ ಆಯ್ಕೆಯಾದರು. ಕಾರ್ಯದರ್ಶಿ ಚೇತನ್ ಚಕ್ಕರೆ ಹಾಗೂ ವಿಜಯ್ ಕೇಸರಿ, ನಿರ್ದೇಶಕರಾಗಿ ಸಂದೀಪ್ ಕುಮಾರ್, ಟಿ.ಎನ್.ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಖ್ಯ ಚುನಾವಣಾಧಿಕಾರಿಯಾಗಿ ಪತ್ರಕರ್ತ ಓದೇಶ ಸಕಲೇಶಪುರ, ಸಹಾಯಕ ಚುನಾವಣಾಧಿಕಾರಿಗಳಾಗಿ ಶಿವರಾಜು, ಸಿದ್ಧಲಿಂಗೇಶ್ವರ ಕಾರ್ಯನಿರ್ವಹಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಭೂತಿಕೆರೆ ಶಿವಲಿಂಗಯ್ಯ, ಎಸ್.ಮಂಜುನಾಥ್, ಶಿವಲಿಂಗಯ್ಯ, ಅರುಣ್, ಎಂ.ಜಗದೀಶ್, ಜಿ.ಸಿ.ಬೋರಯ್ಯ, ಎಸ್.ಶ್ರೀಧರ್, ಮಹದೇವ್, ನರಸಿಂಗ ರಾವ್, ಗಿರೀಶ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.