ಚನ್ನಪಟ್ಟಣ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಭಾರತೀಯ ರೆಡ್ ಕ್ರಾಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.
ಈ ವೇಳೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಪಿ.ಆರ್.ಸವಿತಾ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಸಮಯದಲ್ಲೇ ಕಾನೂನಿನ ಬಗ್ಗೆ ಅರಿವು ಪಡೆದುಕೊಂಡರೆ ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸಬಹುದು ಎಂದರು.
ಕಾನೂನು ಎಂದರೆ ಶಿಕ್ಷೆ ಕೊಡುವುದಲ್ಲ, ಕಾನೂನನ್ನು ಪ್ರತಿಯೊಬ್ಬರು ಅರಿತಾಗ ಸಮಾಜದಲ್ಲಿ ಯಾವುದೇ ರೀತಿಯ ಕಾನೂನು ವಿರುದ್ಧ ಚಟುವಟಿಕೆಗಳು ನಡೆಯುವುದಿಲ್ಲ. ಕಾನೂನು ತಿಳಿದುಕೊಂಡರೆ ಎಂತಹ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳುವ ಸಾಮಾರ್ಥ್ಯ ಪಡೆದುಕೊಳ್ಳಬಹುದು. ಸಮಾನತೆಯ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು, ಶೈಕ್ಷಣಿಕ ಹಕ್ಕು, ಹೋರಾಟದ ಹಕ್ಕು ಸೇರಿದಂತೆ ಪ್ರತಿಯೊಂದು ಹಕ್ಕುಗಳನ್ನು ಇಂತಹ ಕಾನೂನು ಅರಿವು ಶಿಬಿರಗಳ ಮುಖಾಂತರ ವಿದ್ಯಾರ್ಥಿಗಳು ತಿಳಿಯಬಹುದು ಎಂದು ತಿಳಿಸಿದರು.
ಎಚ್.ವಿ.ಶೇಷಾದ್ರಿ ಅಯ್ಯರ್, ವಿ.ಬಾಲಕೃಷ್ಣ, ಟಿ.ವಿ. ಗಿರೀಶ್, ಅಂಬಿಕಾ, ಸುರೇಖಾ, ಪ್ರಕಾಶ್, ಎನ್.ಮಧುಸೂದನ್, ರಮೇಶ್, ಎಂ.ಪರಮಶಿವಯ್ಯ, ಎಂ.ರಾಜಶೇಖರ್, ಸುಷ್ಮಾ, ಕೆ.ಎಸ್.ಶಂಕರಯ್ಯ, ಮನೋಹರ್, ಕೆ.ಎಸ್.ಚಂದ್ರಶೇಖರಯ್ಯ, ಶಿಕ್ಬತ್ ಉಲ್ಲಾಖಾನ್, ವಿ.ನರೇಂದ್ರ, ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.