ADVERTISEMENT

ಅರ್ಹರಿಗೆ ನಿವೇಶನ: ಶಾಸಕ ಯೋಗೇಶ್ವರ ಸೂಚನೆ

ಆಶ್ರಯ ಸಮಿತಿ, ನಗರಸಭೆ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 3:09 IST
Last Updated 1 ಜನವರಿ 2026, 3:09 IST
ಚನ್ನಪಟ್ಟಣದಲ್ಲಿ ಆಶ್ರಯ ಸಮಿತಿ ಹಾಗೂ ನಗರಸಭೆ ಅಧಿಕಾರಿಗಳ ಸಭೆ ನಡೆಯಿತು 
ಚನ್ನಪಟ್ಟಣದಲ್ಲಿ ಆಶ್ರಯ ಸಮಿತಿ ಹಾಗೂ ನಗರಸಭೆ ಅಧಿಕಾರಿಗಳ ಸಭೆ ನಡೆಯಿತು    

ಚನ್ನಪಟ್ಟಣ: ನಗರದ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ನಗರಸಭೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಸೂಚಿಸಿದರು.

ನಗರದಲ್ಲಿ ಮಂಗಳವಾರ ನಡೆದ ಆಶ್ರಯ ಸಮಿತಿ ಸಭೆ ಹಾಗೂ ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಭೂಮಿ ಗುರುತಿಸಿ, ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು. ನಗರಸಭೆ ವ್ಯಾಪ್ತಿಯಲ್ಲಿ ಲಭ್ಯವಿಲ್ಲದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಭೂಮಿ ಗುರುತಿಸಬೇಕು. ನಗರದಲ್ಲಿ ವಾಸಿಸುತ್ತಿರುವ ಸಾಕಷ್ಟು ಮಂದಿಗೆ ನಿವೇಶನ ಇಲ್ಲ. ಅದರಲ್ಲೂ ಪೌರಕಾರ್ಮಿಕರಿಗೆ ಮೊದಲು ನಿವೇಶನ ನೀಡಬೇಕು. ಅವರ ಬಹುದಿನಗಳ ಬೇಡಿಕೆ ಈಡೇರಿಸಬೇಕು. ಕೂಲಿ ಕೆಲಸ ಹಾಗೂ ಮನೆ ಕೆಲಸಗಳಿಗೆ ಹೋಗುವ ನಿರ್ಗತಿಕ ಫಲಾನುಭವಿಗಳನ್ನು ಗುರುತಿಸಿಬೇಕು ಎಂದು ಸೂಚಿಸಿದರು.

ADVERTISEMENT

ನಿವೇಶನ ನೀಡುವ ವಿಚಾರದಲ್ಲಿ ಲಾಟರಿ ಪದ್ಧತಿ ರದ್ದು ಮಾಡಬೇಕು. ನಗರಸಭೆ ಅಥವಾ ಗ್ರಾಮೀಣ ಪ್ರದೇಶದಲ್ಲಿ ನಿವೇಶನಗಳನ್ನು ಹಂಚುವಾಗ ಫಲಾನುಭವಿಗಳ ಬಡತನದ ಮಾನದಂಡ ಪರಿಗಣಿಸಬೇಕು. ಕೆಲವು ಉಳ್ಳವರಿಗೆ ನಿವೇಶನ ಪತ್ರಗಳು ದೊರೆತಿವೆ ಎಂಬ ಮಾಹಿತಿ ಇದೆ. ಅಂತಹವರನ್ನು ಗುರ್ತಿಸಿ ಹಕ್ಕುಪತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸೂಚಿಸಿದರು.

ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಪೌರಾಯುಕ್ತ ಮಹೇಂದ್ರ, ಆಶ್ರಯ ಸಮಿತಿ ಸದಸ್ಯರಾದ ವೆಂಕಟೇಶ್, ಗೌರಮ್ಮ, ಟಿ.ಬಾಲುಕುಮಾರ್, ಇಬ್ರಾಹಿಂ ಖಾನ್, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.