ADVERTISEMENT

ಸ್ಮಶಾನ ಸ್ವಚ್ಛಗೊಳಿಸಿ ಹೊಸ ವರ್ಷ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 14:46 IST
Last Updated 2 ಜನವರಿ 2024, 14:46 IST
ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿದ್ದ ಸ್ಮಶಾನ ಜಾಗದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಯುವಕರು
ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿದ್ದ ಸ್ಮಶಾನ ಜಾಗದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಯುವಕರು   

ಚನ್ನಪಟ್ಟಣ: ನಗರದ ಮಂಗಳವಾರಪೇಟೆಯ ಯುವಕರು ತಮ್ಮ ವಾರ್ಡಿಲ್ಲಿದ್ದ ಸ್ಮಶಾನ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿ ಸ್ವಚ್ಛತೆ ಮಾಡುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಬರಮಾಡಿಕೊಂಡಿದ್ದಾರೆ.

ಭಾನುವಾರ ತಮ್ಮ ವಾರ್ಡಿನಲ್ಲಿದ್ದ ಸ್ಮಶಾನ ಜಾಗಕ್ಕೆ ಬಂದ ಯುವಕರು ಹಾಗೂ ಹಿರಿಯರು ಸ್ಮಶಾನದಲ್ಲಿ ದಟ್ಟವಾಗಿ ಬೆಳೆದಿದ್ದ ಗಿಡಗಂಟೆಗಳನ್ನು ತೆರವು ಮಾಡಿದರು. ನಂತರ ಅವುಗಳಿಗೆ ಬೆಂಕಿ ಹಚ್ಚಿ ಸ್ಮಶಾನವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿ ಗಮನ ಸೆಳೆದರು.

ಸ್ಮಶಾನದಲ್ಲಿ ಹಲವು ದಿನಗಳಿಂದ ಗಿಡಗಂಟಿ ಬೆಳೆದು ಪೊದೆಗಳು ನಿರ್ಮಾಣವಾಗಿದ್ದವು. ಸ್ಮಶಾನಕ್ಕೆ ಬರುವ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿತ್ತು. ಇದನ್ನು ಅರಿತು ಹೊಸ ವರ್ಷದ ಮುನ್ನಾ ದಿನ ಸ್ವಚ್ಛತಾ ಅಭಿಯಾನ ಕೈಗೊಂಡು ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದ್ದಾರೆ.

ADVERTISEMENT

ಶ್ರಮದಾನದಲ್ಲಿ ಮಂಗಳವಾರಪೇಟೆಯ ವಕೀಲ ಕುಮಾರ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೆಂಪರಾಜು, ಯುವ ಮುಖಂಡ ಎಂ.ವಿ. ಶ್ರೀನಿವಾಸ್, ಯುವಕರಾದ ಮಂಜು, ಕೇಶವ, ಲೋಕೇಶ್, ದೇವರಾಜು, ಜ್ಯೋತಿ, ಸಂಜಯ್, ಭರತ್, ಕೈಲಾಸಿ, ಸಂಜಯ್, ಕಿರಣ್, ದಿಲೀಪ್, ಸುನೀಲ್, ಮಣಿ, ರಾಹುಲ್ ಭಾಗವಹಿಸಿದ್ದರು.

ಸ್ವಚ್ಛತಾ ಅಭಿಯಾನದ ನಂತರ ಮಂಗಳವಾರಪೇಟೆಯ ಸ್ಮಶಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.