ADVERTISEMENT

ಸಂಸದ ಮಂಜುನಾಥ್ ಮಾಗಡಿಗೆ ಎಷ್ಟು ಅನುದಾನ ತಂದಿದ್ದಾರೆ: ಜಾರಿಪಾಳ್ಯ ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 3:02 IST
Last Updated 30 ಜನವರಿ 2026, 3:02 IST
ಮಾಗಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪೂಜಾರಿಪಾಳ್ಯ ಕೆ.ಕೃಷ್ಣಮೂರ್ತಿ ಮಾತನಾಡಿದರು.
ಮಾಗಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪೂಜಾರಿಪಾಳ್ಯ ಕೆ.ಕೃಷ್ಣಮೂರ್ತಿ ಮಾತನಾಡಿದರು.   

ಮಾಗಡಿ : ಸಂಸದರಾಗಿ ಆಯ್ಕೆಯಾಗಿರುವ ಡಾ. ಸಿ.ಎನ್.ಮಂಜುನಾಥ್ ರವರು ಮಾಗಡಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಿಜೆಪಿ ಪಕ್ಷದವರು ತೋರಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಪ್ರಶ್ನೆಸಿದರು.

ಪಟ್ಟಣದ ಜ್ಯೋತಿನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ವತಿಯಿಂದ ಇತ್ತೀಚಿಗಷ್ಟೇ ಮಾಗಡಿ ಪಟ್ಟಣದಲ್ಲಿ ನಡೆಯುತ್ತಿರುವ ಕೆ-ಶಿಫ್ ಕಾಮಗಾರಿ ವಿಳಂಬ ದಿಂದ ಧೂಳು ಆಗುತ್ತಿದೆ ಎಂದು ವ್ಯಂಗ್ಯದಿಂದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಅಭಿವೃದ್ಧಿ ಕಾಮಗಾರಿ ನಡೆಯುವ ಸಮಯದಲ್ಲಿ ತೊಂದರೆಗಳು ಸರ್ವೆ ಸಾಮಾನ್ಯ, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬೆಂಗಳೂರು-ಮಾಗಡಿ ಕೆಶಿಪ್ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಆನಂತರ ಬಿಜೆಪಿ ಸರ್ಕಾರ ಇತ್ತು, ನಮ್ಮ ತಾಲ್ಲೂಕಿನವರೇ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ರವರು ಉಪ ಮುಖ್ಯಮಂತ್ರಿಯಾಗಿದ್ದರು, ಆಗ ಕಾಮಗಾರಿಯನ್ನು ಪೂರ್ಣಗೊಳಿಸಬಹುದಿತ್ತು, ಕೆ-ಶಿಫ್ ರಸ್ತೆಗೆ ಕೆಲವರು ಜಾಗ ಬಿಟ್ಟಿರಲಿಲ್ಲ, ಅದನ್ನು ಬಿಜೆಪಿಯವರೇ ಬಿಡಿಸಿ ಕೊಡಬಹುದಿತ್ತು, ಬಾಲಕೃಷ್ಣ ರವರು ಶಾಸಕರಾದ ನಂತರ ಜಾಗದ ಸಮಸ್ಯೆಯನ್ನು ಬಗೆಹರಿಸಿದ್ದಾರೆ, ಆ ಸಮಯದಲ್ಲಿ ಸುಮ್ಮನ್ನೇ ಇದ್ದ ಬಿಜೆಪಿ ಮುಖಂಡರು ಅದನ್ನು ಮಾಡದೇ ಸರ್ಕಾರವಿದೆ, ಅಧಿಕಾರಬೇಕು ಎಂದು ಓಡಾಡಿಕೊಂಡಿದ್ದು, ಈಗ ಸುಖಾಸುಮ್ಮನೇ ಶಾಸಕರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಕೃಷ್ಣಮೂರ್ತಿ ಹೇಳಿದರು.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿದ್ದು, ಶಾಸಕ ಎಚ್.ಸಿ.ಬಾಲಕೃಷ್ಣ ರವರು ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಅನುದಾನವನ್ನು ತರುತ್ತಿದ್ದಾರೆ, ಮಾಗಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ, ವಿರೋಧ ಪಕ್ಷದವರು ಟೀಕೆ ಮಾಡಲಿ ಬೇಡ ಎನ್ನುವುದಿಲ್ಲ, ಟೀಕೆಯನ್ನು ಸಕರಾತ್ಮಕವಾಗಿ ಟೀಕೆ ಮಾಡಬೇಕು ಎಂದ ಕೆ-ಶಿಫ್ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿರಲಿಲ್ಲ, ಗುತ್ತಿಗೆದಾರ ಬಿಟ್ಟು ಓಡಿ ಹೋಗಿದ್ದ, ನಮ್ಮ ಶಾಸಕರು, ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಜತೆ ಸೇರಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ಕೊಡಿಸಿದ್ದಾರೆ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣ ಮಾಡಲಾಗುತ್ತದೆ ಅಭಿವೃದ್ಧಿಗೆ ಸಹಕಾರ ನೀಡಿ ಇಲ್ಲವಾದರೆ ಈ ರೀತಿ ಜನಗಳಿಗೆ ತಪ್ಪು ಸಂದೇಶ ನೀಡಬೇಡಿ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯ ಸಂಸದರಾದ ಸಿ.ಎನ್.ಮಂಜುನಾಥ್ ಅವರಿಗೆ ಹೆಚ್ಚಿನ ಮತಗಳನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಗಡಿ ತಾಲ್ಲುಇಕಿನ ಮತದಾರರು ನೀಡಿದ್ದು, ಅವರ ಕೊಡುಗೆ ಈ ಕೇತ್ರಕ್ಕೆ ಏನು ತಾಲ್ಲೂಕಿನ ನೀರಾವರಿ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಸಂಸದರು ಚಕಾರವೆತ್ತುತ್ತಿಲ್ಲ, ಹೇಮಾವತಿ ನೀರಾವರಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಯೋಜನೆಯ ಬಗ್ಗೆ ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ರವರು ಓಡಾಡುತ್ತಿದ್ದಾರೆ ಇದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ, ಡಿ.ಕೆ.ಸುರೇಶ್ ಸೋತರು ಮನೆಯಲ್ಲಿ ಕುಳಿತುಕೊಂಡಿಲ್ಲ, ಮಾಗಡಿ ತಾಲ್ಲೂಕಿಗೆ ಎತ್ತಿನಹೊಳೆ ನೀರು ತರುವ ಕೆಲಸ ಮಾಡುತ್ತಿದ್ದಾರೆ, ಇದರ ಜತೆಗೆ ಸತ್ತೇಗಾಲ ನೀರಾವರಿ ಯೋಜನೆಯನ್ನು ತಂದು ತಾಲ್ಲೂಕಿನ ಕೆರೆ ತುಂಬಿಸುತ್ತಿದ್ದಾರೆ, ಅಧಿಕಾರ ಇಲ್ಲದಿದ್ದರೂ ಸಹ ಡಿ.ಕೆ.ಸುರೇಶ್ ಹಲವಾರು ಯೋಜನೆಗಳನ್ನು ತರುತ್ತಿದ್ದು, ಗೆದ್ದಿರುವ ಸಿ.ಎನ್.ಮಂಜುನಾಥ್ ಅವರ ಕೊಡುಗೆ ತಾಲ್ಲೂಕಿಗೆ ಏನೂ ಇಲ್ಲ, ತಾಲ್ಲೂಕಿನಲ್ಲಿರುವ ಸಮಸ್ಯೆಗಳ ಬಗ್ಗೆ ಜನರನ್ನು ಕರೆದು ಸಿ.ಎನ್.ಮಂಜುನಾಥ್ ಯಾವತ್ತೂ ಸಹ ಚರ್ಚಿಸಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ವಿದ್ದು, ಅಲ್ಲಿಂದ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಬೇಕು ಹೊರತು ಉಡಾಫೆ ಮಾತಡುವುದನ್ನು ಬಿಜೆಪಿ ಮುಖಂಡರು ಬಿಡಬೇಕು ಎಂದು ಕೃಷ್ಣಮೂರ್ತಿ ವಾಗ್ದಾಳಿ ನಡೆಸಿದರು.

ಪಂಚಗ್ಯಾರಂಟಿ ತಾಲ್ಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು,

ADVERTISEMENT

ಇದೇ ವೇಳೆ ಪುರಸಭೆ ಮಾಜಿ ಸದಸ್ಯರಾದ ಹೇಮಲತಾ, ಶಬ್ಬೀರ್, ರಹಮತ್‌, ಮೂರ್ತಿ, ಗಂಗರಾಜು, ಜಯಮ್ಮ, ಚಿಕ್ಕರಾಜು, ಪರ್ವಿಜ್ ಆಹಮದ್, ಆನಂದ್‌ಗೌಡ, ಕೇಬಲ್ ಮಂಜುನಾಥ್, ಚಿಕ್ಕಣ್ಣ, ಶಾಂತಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.