ಹಾರೋಹಳ್ಳಿ: ತಾಲ್ಲೂಕಿನ ದೊಡ್ಡ ಸಾದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.
ಸಂಘದ ಆವರಣದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಪ್ರತಾಪ್.ಎಂ, ಬಂಗಾರಪ್ಪ, ಶಂಕರ, ನಾಗೇಶ, ಶಿವಮಾದಪ್ಪ, ಚಂದ್ರಶೇಖರ, ವಿಶಾಲಾಕ್ಷಿ, ಮುನಿಮುತ್ತಯ್ಯ, ರಾಜಮ್ಮ, ಲೋಕೇಶ್ ವಿಜೇತರಾಗಿದ್ದಾರೆ.
ಸಹಕಾರ ಇಲಾಖೆಯ ರಮ್ಯಾಶ್ರೀ ಚುನಾವಣಾಧಿಕಾರಿಯಾಗಿ, ಶಿವರಾಜು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಕೀರಣಗೆರೆ ಜಗದೀಶ್, ಲೋಕೇಶ್, ಹರೀಶ್ ಕುಮಾರ್, ಸಾದೇನಹಳ್ಳಿ ಈಶ್ವರ್, ಅಶೋಕ್, ಶಿವಣ್ಣ, ಅಂಕಪ್ಪ, ನಾಗರಾಜು, ಮರಿಯಪ್ಪ, ಶಂಕರ್, ಕೃಷ್ಣಪ್ಪ, ಮಹಾಲಿಂಗು, ನಾಗೇಶ್, ಸುರೇಂದ್ರ ಬಾಬು, ನಿಂಗಪ್ಪ, ಮಂಜುನಾಥ್, ಪ್ರಸನ್ನ, ನವೀನ್, ಮಹೇಶ್, ಪ್ರಕಾಶ್, ರಾಜು ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.