ADVERTISEMENT

‘ಸಂವಿಧಾನ ಸುಂದರ ಹೂತೋಟವಿದ್ದಂತೆ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 13:12 IST
Last Updated 26 ಜನವರಿ 2019, 13:12 IST
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಎನ್‌.ರಮೇಶ್‌
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಎನ್‌.ರಮೇಶ್‌   

ಮಾಗಡಿ: ಸಂವಿಧಾನದತ್ತ ಆಶಯ ಸರ್ವರಿಗೂ ತಲುಪಿಸುವ ಮೂಲಕ ಸದೃಢ ದೇಶ ಕಟ್ಟಲು ಎಲ್ಲರೂ ಶ್ರಮಿಸಬೇಕಾಗಿದೆ ಎಂದು ತಹಶೀಲ್ದಾರ್‌ ಎನ್‌.ರಮೇಶ್‌ ಸಲಹೆ ನೀಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಟ್ಟಕಡೆ ಮನುಷ್ಯನಿಗೂ ಕನಿಷ್ಠ ಸವಲತ್ತು ಲಭಿಸಬೇಕೆಂಬುದು ನಿರ್ದೇಶನಾತ್ಮಕ ತತ್ವಗಳ ಸಂದೇಶ. ದೇಶದ ಸಂಪತ್ತಿನ ಸಮಾನ ಹಂಚಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ADVERTISEMENT

ಶಾಸಕ ಎ.ಮಂಜುನಾಥ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿರುವ ಸಂವಿಧಾನ ಒಂದು ಸುಂದರ ಹೂತೋಟವಿದ್ದಂತೆ. ಸರ್ವ ಜನಾಂಗದ ಹೂತೋಟದಲ್ಲಿನ ಪುಷ್ಪಗಳು ಜನರು ಎಂದು ತಿಳಿದುಕೊಂಡು ಸೌಹಾರ್ದತೆಯಿಂದ ಬಾಳಬೇಕೆಂದು ಕಿವಿಮಾತು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ್‌, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕಲ್ಪನಾ ಶಿವಣ್ಣ ಮಾತನಾಡಿದರು. ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ್‌, ಉಪಾಧ್ಯಕ್ಷ ನಾಗೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್‌, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಗಾಂಧಿ ವೇಷಧಾರಿ ಕಲ್ಯದ ಬೊಮ್ಮಲಿಂಗಯ್ಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್‌.ನಂಜಯ್ಯ, ಪುರಸಭೆ ಸದಸ್ಯರಾದ ಎಂ.ಎನ್‌.ಮಂಜುನಾಥ, ಹೊಂಬಮ್ಮ, ನಿರ್ಮಲಾ ಸೀತಾರಾಮ್‌, ಬಾಲರಘು, ಬಸವರಾಜು, ನಯಾಜ್‌ ಅಹಮದ್‌,ಮಹೇಶ್‌, ಶಿವಕುಮಾರ್‌, ನರಸಿಂಹ ಮೂರ್ತಿ,ಶಿಕ್ಷಕರ ಸಂಘದ ರಾಜ್ಯ ಪ್ರತಿನಿಧಿ ಎಂ.ಕೆಂಪೇಗೌಡ, ಜಿಲ್ಲಾ ಸಂಘದ ಅಧ್ಯಕ್ಷ ಕೆ.ಎಚ್‌.ಲೋಕೇಶ್‌, ತಾಲ್ಲೂಕು ಪಂಚಾಯಿತಿ ಇಒ ಚಂದ್ರು, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್‌, ಸರ್ಕಲ್‌ ಇನ್‌ಪೆಕ್ಟರ್‌ ರವಿಕುಮಾರ್‌,ಇನಾಯತ್‌ ಉಲ್ಲಾ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್‌, ರಂಗಕರ್ಮಿ ಚಿಕ್ಕವೀರಯ್ಯ,ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಾಂತರಾಜು, ಕ್ಷೇತ್ರ ಸಮನ್ವಯಾಧಿಕಾರಿ ರೂಪಾಕ್ಷ, ವಕೀಲ ಸತೀಶ್‌ ಇದ್ದರು.

‘ಪ್ರಜಾವಾಣಿ’ ಮಾರಾಟ ಪ್ರತಿನಿಧಿ ಶ್ರೀಧರ್‌, ಶಿಕ್ಷಕ ಮಹದೇವಯ್ಯ, ದಾದಿ ಸಾವಿತ್ರಮ್ಮ ಅವರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.