ADVERTISEMENT

ಮಿನಿ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 7:36 IST
Last Updated 14 ಜನವರಿ 2022, 7:36 IST
ಮಾಗಡಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕ ಎ. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ರೂಪೇಶ್‌ ಹಾಗೂ ಸದಸ್ಯರು ಹಾಜರಿದ್ದರು
ಮಾಗಡಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕ ಎ. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ರೂಪೇಶ್‌ ಹಾಗೂ ಸದಸ್ಯರು ಹಾಜರಿದ್ದರು   

ಮಾಗಡಿ: ‘ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ವಿವಿಧ ಕ್ರೀಡೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ₹ 15 ಲಕ್ಷ ವೆಚ್ಚದಲ್ಲಿ ಮಿನಿ ಕ್ರೀಡಾಂಗಣ ನಿರ್ಮಿಸಲಾಗುವುದು’ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

ಪಟ್ಟಣದಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಿನಿ ಕ್ರೀಡಾಂಗಣದಲ್ಲಿ ಜಾಗಿಂಗ್ ಟ್ರ್ಯಾಕ್, ಸ್ಕೇಟಿಂಗ್ ಕೋರ್ಟ್‌, ಬ್ಯಾಸ್ಕೆಟ್ ಬಾಲ್, ಕಬಡ್ಡಿ ಕೋರ್ಟ್‌, ವಾಲಿಬಾಲ್ ಕೋರ್ಟ್‌ ನಿರ್ಮಿಸಲಾಗುವುದು. ಆರೋಗ್ಯವೇ ಭಾಗ್ಯ ಎಂಬ ಮಾತು ಇಂದು ಸತ್ಯ ಸಂದೇಶವಾಗಿದೆ. ಆವರಣದ ಸುತ್ತಲೂ ಸೋಲಾರ್ ದೀಪ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಪೂರ್ಣವಾಗಲು ಹಣದ ಕೊರತೆ ಉಂಟಾದರೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಲಾಗುವುದು ಎಂದರು.

ADVERTISEMENT

ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಧಿಕಾರಿಗಳ ಸಭೆ ನಡೆಸಲಾಗುವುದು. ಹಿಂದೆ ಆರಂಭಿಸಿದ್ದ ಮಾಗಡಿ ಟೌನ್, ಹುಲಿಕಟ್ಟೆ, ಯಲ್ಲಾಪುರ ಮತ್ತು ಕುದೂರಿನ ಕೋವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ರೂಪೇಶ್‌, ಉಪಾಧ್ಯಕ್ಷ ರಹಮತ್‌ ಉಲ್ಲಾ ಖಾನ್‌, ಸ್ಥಾಯಿಸಮಿತಿ ಅಧ್ಯಕ್ಷ ಕೆ.ಕೆ. ಕಾಂತರಾಜು, ಸದಸ್ಯರಾದ ನಾಗರತ್ನಮ್ಮ ರಾಜಣ್ಣ, ಎಂ.ಎನ್. ಮಂಜುನಾಥ್‌, ಅಶ್ವತ್ಥ್, ಅನಿಲ್‌ಕುಮಾರ್‌, ಪ್ರಾಂಶುಪಾಲ ಕಾಂತರಾಜು, ಉಪನ್ಯಾಸಕರಾದ ಡಾ.ನರಸಿಂಹಮೂರ್ತಿ, ಬೆಟ್ಟಸ್ವಾಮಿ, ಎನ್.ಇ.ಎಸ್. ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.