ಕನಕಪುರ: ನಗರ ಒಂದು ಕಡೆ ಅಭಿವೃದ್ಧಿ ಕಾಣುತ್ತಿದ್ದರೆ ಮತ್ತೊಂದು ಕಡೆ ಒಳಚರಂಡಿಗೆ ನಿರ್ಮಾಣ ಮಾಡಿರುವ ಮ್ಯಾನ್ ಹೋಲ್ ಗುಂಡಿಗಳು ಬಾಯಿ ತೆರೆದುಕೊಂಡು ಅಪಾಯದ ವಲಯಗಳಾಗಿ ಪರಿಣಮಿಸಿವೆ.
ಇಲ್ಲಿನ ಸಬ್ ರಿಜಿಸ್ಟರ್ ಕಚೇರಿ ಮುಂಭಾಗದ ತಿರುವಿನಲ್ಲಿ ನಿರ್ಮಾಣ ಮಾಡಿರುವ ಮ್ಯಾನ್ ಹೋಲ್ ಮೇಲೆ ಮುಚ್ಚಳ ಇಲ್ಲದೆ ಬಾಯಿ ತೆರೆದುಕೊಂಡಿದ್ದು ಅಪಘಾತದ ವಲಯವಾಗಿದೆ.
ರಸ್ತೆ ತಿರುವು ಮತ್ತು ಮುಖ್ಯ ರಸ್ತೆ ಮಧ್ಯಭಾಗದಲ್ಲಿ ಹಲವು ದಿನಗಳಿಂದ ಮ್ಯಾನ್ ಹೋಲ್ ಗುಂಡಿ ಬಾಯಿ ತೆರೆದುಕೊಂಡಿದ್ದರೂ ಸಂಬಂಧಪಟ್ಟವರು ಸರಿಪಡಿಸುವ ಕೆಲಸ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಬ್ ರಿಜಿಸ್ಟರ್ ಕಚೇರಿ ಮುಂಭಾಗದ ತಿರುವಿನಲ್ಲಿ ಮ್ಯಾನ್ ಹೋಲ್ ಗುಂಡಿ ಅಪಾಯಕಾರಿಯಾಗಿದ್ದು ದೊಡ್ಡಮಟ್ಟದ ಅನಾಹುತ ಆಗುವುದಕ್ಕಿಂತ ಮುಂಚೆ ನಗರಸಭೆ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.