ADVERTISEMENT

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಕಾಮಿಡಿ ಕಿಲಾಡಿಗಳು’ ಷೋಗೆ ಆಡಿಷನ್ ಇಂದು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 3:03 IST
Last Updated 8 ಸೆಪ್ಟೆಂಬರ್ 2025, 3:03 IST
ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಷಿಪ್‌
ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಷಿಪ್‌   

ರಾಮನಗರ: ಜೀ಼ ಕನ್ನಡ ವಾಹಿನಿಯ ರಿಯಾಲಿಟಿ ಷೋಗಳಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತು ‘ಕಾಮಿಡಿ ಕಿಲಾಡಿಗಳು’ ಆಡಿಷನ್ ನಗರದ ಬಿ.ಎಂ. ರಸ್ತೆಯಲ್ಲಿರುವ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ನಡೆಯಲಿದೆ.

ಎರಡೂ ಷೋಗಳ ಆಡಿಷನ್‌ನಲ್ಲಿ ಭಾಗವಹಿಸುವವರು 6ರಿಂದ 60 ವರ್ಷದೊಳಗಿರಬೇಕು. ಸ್ಪರ್ಧಿಗಳು ಡಾನ್ಸ್ ಮತ್ತು ಕಾಮಿಡಿ ಕುರಿತ ಪ್ರತ್ಯೇಕ ಸ್ಕಿಟ್‌ನೊಂದಿಗೆ ಹಾಜರಾಗಬೇಕು. ಬರುವಾಗ ಇತ್ತೀಚಿನ ಪಾಸ್‌ಪೋರ್ಟ್ ಸೈಜ್‌ ಅಳತೆಯ ಫೋಟೊ, ವಿಳಾಸವಿರುವ ಯಾವುದಾದರೂ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ ತರಬೇಕು. ಆಡಿಷನ್‌ನಗೆ ಯಾವುದೇ ಶುಲ್ಕವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT