ADVERTISEMENT

ಕಾಡಾನೆ ದಾಳಿಗೆ ಬೆಳೆ ನಾಶ

ಲಕ್ಷಾಂತರ ರೂಪಾಯಿ ನಷ್ಟ: ರೈತರ ಬದುಕು ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:03 IST
Last Updated 4 ಸೆಪ್ಟೆಂಬರ್ 2021, 3:03 IST
ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ಆನೆ ದಾಳಿಗೆ ನಾಶವಾದ ತೆಂಗು
ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ಆನೆ ದಾಳಿಗೆ ನಾಶವಾದ ತೆಂಗು   

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಆನೆಗಳ ಹಿಂಡು ದಾಳಿ ನಡೆಸಿ ಬೆಳೆಗಳನ್ನು ನಾಶ ಮಾಡಿದೆ.

ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಯ್ಯದದೊಡ್ಡಿ ಸುತ್ತಲಿನ ಜಮೀನುಗಳಿಗೆ ಲಗ್ಗೆ ಇಟ್ಟ ಆನೆಗಳು ಚಿನ್ನಗಿರಿ ಕೃಷ್ಣ ಎಂಬುವರ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆಯನ್ನು ನಾಶ ಮಾಡಿವೆ.

ಚಂದ್ರಪ್ಪ ಅವರ ಜಮೀನಿನಲ್ಲಿನ ಹಾಗಲಕಾಯಿ ಹಾಗೂ ವೆಂಕಟಪ್ಪ ಅವರ ಜಮೀನಿನಲ್ಲಿನ ಈರೇಕಾಯಿ ಬೆಳೆಯೂ ಆನೆಗಳ ಪಾಲಾಗಿದೆ. ಚಿಕ್ಕಣ್ಣ ವೆಂಕಟಪ್ಪ ಅವರ ಜಮೀನಿನಲ್ಲಿನ ಟೊಮೆಟೊ, ತೆಂಗಿನ ಸಸಿಗಳು, ಸುತ್ತಲಿನ ಜಮೀನುಗಳಲ್ಲಿನ ಪಪ್ಪಾಯ ಬೆಳೆಯೂ ನಾಶವಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ADVERTISEMENT

ಚನ್ನಪಟ್ಟಣದ ದೊಡ್ಡನಹಳ್ಳಿ ಹಾಗೂ ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಮೂರು ಆನೆಗಳ ಹಿಂಡು ಶುಕ್ರವಾರ ದಾಳಿ ನಡೆಸಿದೆ. ಸದ್ಯ ಕಾಡನಕುಪ್ಪೆ ಬಳಿ ಈ ಆನೆಗಳು ಇವೆ. ಇವುಗಳನ್ನು ಕಾಡಿಗೆ ಕಳುಹಿಸುವ ಪ್ರಯತ್ನ ನಡೆದಿದೆ ಎಂದು ವಲಯ ಅರಣ್ಯಧಿಕಾರಿ ಕಿರಣ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.