ADVERTISEMENT

ರಾಮನಗರ: ‘ಪ್ರಾದೇಶಿಕ ಚಿಂತನೆ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 3:50 IST
Last Updated 5 ನವೆಂಬರ್ 2021, 3:50 IST
ಕರವೇಗೆ ಸೇರ್ಪಡೆಗೊಂಡ ಹೊಸ ಪದಾಧಿಕಾರಿಗಳು
ಕರವೇಗೆ ಸೇರ್ಪಡೆಗೊಂಡ ಹೊಸ ಪದಾಧಿಕಾರಿಗಳು   

ಕನಕಪುರ: ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟವು ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಯೇ ಪ್ರಧಾನ ಆದ್ಯತೆಯಾಗಿದೆ. ಇದು ನಾಡಿನ ಯುವಜನರು ಸಂಘಟನೆ ಸೇರಲು ಪ್ರೇರಕವಾಗಿದೆ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ ತಿಳಿಸಿದರು.

ಇಲ್ಲಿನ ಎಂ.ಜಿ. ರಸ್ತೆಯ ಕರವೇ ತಾಲ್ಲೂಕು ಘಟಕದ ಕಚೇರಿಯಲ್ಲಿ ನಡೆದ ಕರವೇ ಸಂಘಟನೆಗೆ ನೂತನ ಸದಸ್ಯರ ಸೇರ್ಪಡೆ ಹಾಗೂ ಪದಾಧಿಕಾರಿಗಳ ನೇಮಕಾತಿ ಸಭೆಯಲ್ಲಿ ಅವರು ಮಾತನಾಡಿದರು.

ಕರವೇ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ತಾಲ್ಲೂಕು ಅಧ್ಯಕ್ಷ ಜೈರಾಮೇಗೌಡ ಅವರು ಮಾತನಾಡಿದರು.

ADVERTISEMENT

ತಾಮಸಂದ್ರ ಕೆ. ಶ್ರೀನಿವಾಸ್ ಪ್ರಸಾದ್(ಯುವ ಘಟಕ ಜಿಲ್ಲಾ ಉಪಾಧ್ಯಕ್ಷ), ಬೆಣಚುಕಲ್ಲುದೊಡ್ಡಿ ಗುಣಶೇಖರ್(ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ), ಅಂಚಿಪುರ ನಾಗೇಂದ್ರ(ಕಾರ್ಮಿಕ ಘಟಕದ ಉಪಾಧ್ಯಕ್ಷ) ಅವರಿಗೆ ನೇಮಕಾತಿ ಪತ್ರ ನೀಡಲಾಯಿತು.

ಆಲನತ್ತ ಗಿರೀಶ್‌, ಶಿವಸತ್ಯ, ತಿಮ್ಮೇಗೌಡನದೊಡ್ಡಿ ಚಂದ್ರು, ಯಡವನಹಳ್ಳಿ ಸಂಪತ್ತು, ಬಡೆಸಾಬರದೊಡ್ಡಿ ಸೋಮಶೇಖರ್, ಸಾಗರ್ ಅಂಚೀಪುರ, ಚಿಕ್ಕನದೊಡ್ಡಿ ಶಿವಕುಮಾರ್ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.