ADVERTISEMENT

ಔಷಧಿಗೆ ವೈದ್ಯರ ಚೀಟಿ ಕಡ್ಡಾಯ: ಬಿ.ಜಿ. ಶ್ರೀನಿವಾಸಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 4 ಮೇ 2021, 4:41 IST
Last Updated 4 ಮೇ 2021, 4:41 IST
ಮಾಗಡಿ ಪಟ್ಟಣದ ಔಷಧಿ ಮಳಿಗೆಗಳಿಗೆ ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸಪ್ರಸಾದ್‌, ಡಿಟಿಒ ಡಾ.ಕುಮಾರ್‌, ಸಿಪಿಐ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು
ಮಾಗಡಿ ಪಟ್ಟಣದ ಔಷಧಿ ಮಳಿಗೆಗಳಿಗೆ ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸಪ್ರಸಾದ್‌, ಡಿಟಿಒ ಡಾ.ಕುಮಾರ್‌, ಸಿಪಿಐ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು   

ಮಾಗಡಿ: ಪಟ್ಟಣದ ಔಷಧಿ ಮಾರಾಟ ಮಳಿಗೆಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಮಾತ್ರೆ ಅಥವಾ ಔಷಧಿ ಮಾರಾಟ ಮಾಡಿದರೆ ಫಾರ್ಮಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸಪ್ರಸಾದ್‌
ತಿಳಿಸಿದರು.

ಪಟ್ಟಣದ ಫಾರ್ಮಸಿಗಳಿಗೆ ಸೋಮವಾರ ಭೇಟಿ ನೀಡಿ ಔಷಧಿ ಮಳಿಗೆಗಳ ಮಾಲೀಕರಿಗೆ ಸೂಚನೆ ನೀಡಿ ಅವರು ಮಾತನಾಡಿದರು.

ಕೆಮ್ಮು, ನೆಗಡಿ, ಜ್ವರ, ಕಫದ ಸಮಸ್ಯೆಗಳಿಗೆ ರೋಗಿಗಳು ನೇರವಾಗಿ ಔಷಧಿ ಮಳಿಗೆಗಳಲ್ಲಿ ಪ್ಯಾರಾಸಿಟಾಮಾಲ್‌, ಡೊಲೊ 650 ಸೇರಿದಂತೆ ಇತರೆ ಮಾತ್ರೆ ತೆಗೆದುಕೊಂಡು ಕೋವಿಡ್ ಸೋಂಕು ಉಲ್ಬಣವಾದ ಮೇಲೆ ಆಸ್ಪತ್ರೆಗೆ ಹೋಗುವುದು ಕಂಡುಬಂದಿದೆ. ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡ ಕೂಡಲೇ ಸಾರ್ವಜನಿಕರು ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆದರೆ ಕೋವಿಡ್‌ ಸೋಂಕು ಹರುಡುವುದನ್ನು ತಡೆಗಟ್ಟಬಹುದು ಎಂದರು.

ADVERTISEMENT

ಔಷಧಿ ಮಳಿಗೆಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಮಾತ್ರೆ ಮತ್ತು ಔಷಧಿ ಮಾರಾಟ ಮಾಡುವುದು ಅಪರಾಧವಾಗಲಿದೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಔಷಧಿ ಮಳಿಗೆಗಳ ಮಾಲೀಕರು ಸಹಕರಿಸಬೇಕು. ಔಷಧಿ ಮಳಿಗೆಗಳ ಮಾಲೀಕರು ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧಿ ಕೊಡುವುದಿಲ್ಲ ಎಂದರು.

ಡಿಟಿಒ ಡಾ.ಕುಮಾರ್‌, ಸಿಪಿಐ ಕುಮಾರ್ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.