ಮಾಗಡಿ: ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಸಂಸದರ ನಿಧಿಯಿಂದ ನಿರ್ಮಿಸಲಾದ ಶುದ್ಧಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಆರು ತಿಂಗಳಾದರೂ ಇನ್ನೂ ದುರಸ್ತಿಯಾಗಿಲ್ಲ.
ದುರಸ್ತಿ ಮಾಡಿಸುವಂತೆ ಸಂಸದ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಎನ್‌ಇಎಸ್ ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.
ಪಟ್ಟಣದ ಕೆಲವು ಬಡಾವಣೆಗಳಿಗೆ ಮಂಚನಬೆಲೆ ಜಲಾಶಯದ ನೀರು ಹರಿಸಲಾಗುತ್ತಿದೆ. ಉಳಿದಂತೆ ಬಹುತೇಕ ಬಡಾವಣೆಗಳಲ್ಲಿ ಕೊಳವೆಬಾವಿಯ ಉಪ್ಪು ನೀರನ್ನೇ ಕುಡಿಯಲು ಬಳಸಬೇಕು. ಇಲ್ಲವೇ ಶುದ್ಧ ಕುಡಿಯುವ ನೀರು ಘಟಕದಿಂದ ನೀರು ತರಬೇಕಾಗುತ್ತದೆ.
ಎನ್‌ಇಎಸ್ ಬಡಾವಣೆ, ನಟರಾಜ ಬಡಾವಣೆ, ಬಾಗೇಗೌಡ ಲೇಔಟ್, ಚನ್ನಪ್ಪ ಬಡಾವಣೆ, ಬೈಚಾಪುರ, ಗದ್ದೆಬಯಲು ಇತರ ಕಡೆ ಮಂಚನಬೆಲೆ ಜಲಾಶಯದ ನೀರು ಸರಬರಾಜು ಮಾಡಬೇಕು. ಎಂಟು ವರ್ಷದ ಹಿಂದೆ ಬಹುಕೋಟಿ ವೆಚ್ಚದಲ್ಲಿ 24X7 ಶುದ್ದ ಕುಡಿಯುವ ನೀರು ಒದಗಿಸಲು ಯೋಜನೆ ಆರಂಭಿಸಲಾಯಿತು. ಹಣ ಖರ್ಚಾದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಬಡಾವಣೆಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.