ADVERTISEMENT

ಕುಡಿದು ವಾಹನ ಚಾಲನೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 8:17 IST
Last Updated 20 ಜೂನ್ 2025, 8:17 IST

ಕನಕಪುರ: ನಗರದಲ್ಲಿ ವ್ಯಕ್ತಿಯೊಬ್ಬನು ಕುಡಿದು ವಾಹನ ಚಲಾಯಿಸಿದಲ್ಲದೆ, ಸಾರ್ವಜನಿಕವಾಗಿ ಪೊಲೀಸರನ್ನು ತಳ್ಳಾಡಿ ರಂಪಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಸಬಾ ಹೋಬಳಿ ಚೀರಣಕುಪ್ಪೆ ಗ್ರಾಮದ ಶಿವಕುಮಾರ್ ಕುಡಿದು ವಾಹನ ಚಲಾಯಿಸಿ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಈ ಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರದಾಡಿದೆ. 

ಶಿವಕುಮಾರ್ ಭಾನುವಾರ ಕುಡಿದು ತನ್ನ ಸ್ನೇಹಿತರ ಜೊತೆ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಮಾಡಿಕೊಂಡು ಹೋಗುವಾಗ ಹಂಪ್‌ ಹತ್ತಿಸುವಾಗ ಹಿಂಬದಿ ಸವಾರ ಕೆಳಗೆ ಬಿದ್ದಿದ್ದಾನೆ. ಆದರೆ, ಅದರ ಅರಿವಿಲ್ಲದೆ ಶಿವಕುಮಾರ್ ಬೈಕ್ ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಇದನ್ನು ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸರು ಕೆಳಗೆ ಬಿದ್ದಿದ್ದ ವ್ಯಕ್ತಿಯನ್ನು ಉಪಚರಿಸಿ, ಕುಡಿದು ವಾಹನ ಚಲಾಯಿಸಿದಂತೆ ಶಿವಕುಮಾರ್ ಅವರಿಗೆ ಬುದ್ಧಿ ಮಾತು ಹೇಳಿದ್ದಾರೆ. ಆಗ ಬೈಕ್‌ನಲ್ಲಿ ಮುಂದೆ ಹೋಗಿದ್ದ ಶಿವಕುಮಾರ್ ತನ್ನ ಸ್ನೇಹಿತನ ಜೊತೆ ವಾಪಸ್ ಬಂದು ಪೊಲೀಸರ ಜೊತೆ ಗಲಾಟೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ್ದಾರೆ. 

ADVERTISEMENT

ಗಲಾಟೆಯನ್ನು ಸ್ಥಳೀಯರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗಿದೆ.  

ಸಂಚಾರಿ ಪೊಲೀಸರು ಶಿವಕುಮಾರ್ ಹಾಗೂ ವರ ಬೈಕ್‌ ಅನ್ನು ವಶಕ್ಕೆ ಪಡೆದು ಪ್ರಕಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.