ADVERTISEMENT

ಸಮಾನತೆ ಸಾರುವ ಈದ್‌ ಉಲ್‌ ಫಿತ್ರ್

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಗಳಲ್ಲಿಯೇ ಸರಳವಾಗಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 3:54 IST
Last Updated 15 ಮೇ 2021, 3:54 IST
ಮಾಗಡಿ ಪಟ್ಟಣದ ಹೊಸ ಮಸೀದಿ ಮೊಹಲ್ಲಾದಲ್ಲಿ ಶುಕ್ರವಾರ ಈದ್‌ ಉಲ್‌ ಫಿತ್ರ್‌ ಹಬ್ಬದಲ್ಲಿ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು
ಮಾಗಡಿ ಪಟ್ಟಣದ ಹೊಸ ಮಸೀದಿ ಮೊಹಲ್ಲಾದಲ್ಲಿ ಶುಕ್ರವಾರ ಈದ್‌ ಉಲ್‌ ಫಿತ್ರ್‌ ಹಬ್ಬದಲ್ಲಿ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು   

ಮಾಗಡಿ: ಪಟ್ಟಣದ ಹೊಸಮಸೀದಿ ಮತ್ತು ಹಳೆಮಸೀದಿ, ಹೊಸಪೇಟೆ, ಹೊಂಬಾಳಮ್ಮನ ಪೇಟೆ ಮೊಹಲ್ಲಾಗಳಲ್ಲಿ ಮುಸ್ಲಿಮರು ಶುಕ್ರವಾರ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈದ್‌ಉಲ್‌ ಫಿತ್ರ್ ಹಬ್ಬವನ್ನು ಸರಳವಾಗಿ ಆಚರಿಸಿದರು.

ಪುರಸಭೆ ಉಪಾಧ್ಯಕ್ಷ ರಹಮತ್‌ ಉಲ್ಲಾಖಾನ್‌ ಮಾತನಾಡಿ, ಮನುಷ್ಯನು ಕೇವಲ ತನ್ನ ವೈಯಕ್ತಿಕ ಏಳಿಗೆಯಲ್ಲಿ ಸಂತಸಪಡದೆ,
ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತವನ್ನೂ ಬಯಸಬೇಕು. ಈದ್‌ ಉಲ್‌ ಫಿತ್ರ್‌ ಸಮಾನತೆಯನ್ನು ಸಾರುತ್ತದೆ. 30 ದಿನಗಳ ಉಪವಾಸ ಆಚರಿಸುವುದುಆತ್ಮ ಶುದ್ಧಿಯ ಪ್ರತೀಕವಾಗಿದೆ. ಪರಸ್ಪರರ ಸಂಬಂಧ, ಬಾಂಧವ್ಯವನ್ನು ಬಲಪಡಿಸುವ ದಿನವಾಗಿದೆ ಎಂದರು.

ಅಪ್ಸರ್‌ ಪಾಷಾ, ಬರ್ಕತ್‌, ಜಮೀರ್‌, ಶಾಬಾಜ್‌, ಶಬ್ಬೀರ್‌ ಪಾಷಾ, ನೂರ್‌ಖಾನ್‌, ಇಲ್ಲೂ, ಇನಾಯತ್‌, ಮುಕ್ತಿಯಾರ್‌, ಸರ್ದಾರ್‌, ಸ್ವಾಭಿಮಾನಿ ಮುಸ್ಲಿಂ ಕನ್ನಡ ರಕ್ಷಣಾ ವೇದಿಕೆಯ ಅನ್ಸರ್‌ ಪಾಷಾ, ನಿವೃತ್ತ ಶಿಕ್ಷಕ ಅಬ್ದುಲ್‌ ರೆಹಮಾನ್‌, ಬಷೀರ್‌ ಇತರರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಸಾಂಕೇತಿಕ ಹಬ್ಬ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿನ ಬಿಸ್ಕೂರು ಮಸೀದಿಯಲ್ಲಿ ಸಾಂಕೇತಿಕವಾಗಿ ನಡೆದ ಈದ್‌ ಉಲ್‌ ಫಿತ್ರ್‌ ಹಬ್ಬ ಆಚರಿಸಲಾಯಿತು. ಕುದೂರು, ಹುಲಿಕಲ್‌, ತಿಪ್ಪಸಂದ್ರೆ, ಸಂಕೀಘಟ್ಟ, ಹೊಸಲಾಯ, ಅಲಿಖಾನ್‌ ಲಾಯ, ಮುತ್ತುಸಾಗರ, ಹುಳ್ಳೇನಹಳ್ಳಿ, ಗೊಲ್ಲಹಳ್ಳಿ, ತೊರೆರಾಮನಹಳ್ಳಿ, ಕಾಗಿಮಢು, ಬಾಣವಾಡಿ, ಗುಡೇಮಾರನಹಳ್ಳಿ, ಮಟ್ಟನದೊಡ್ಡಿ, ಮಂಚನಬೆಲೆ, ಮಾಡಬಾಳ್‌, ಜಮಾಲ್‌ ಪಾಳ್ಯ, ಅಗಲಕೋಟೆ, ಹೊಸಪಾಳ್ಯ, ಸೋಲೂರಿನಲ್ಲಿ ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.