ADVERTISEMENT

ಕನಕಪುರ: ಕಾಡಾನೆ ದಾಳಿ ತೆಂಗಿನ ಸಸಿಗಳು ನಾಶ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 6:22 IST
Last Updated 29 ಮಾರ್ಚ್ 2024, 6:22 IST
ಕನಕಪುರ ಹೊಸ ಕಬ್ಬಾಳು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ತೆಂಗಿನ ಮರಗಳನ್ನು ನಾಶ ಮಾಡಿರುವುದು
ಕನಕಪುರ ಹೊಸ ಕಬ್ಬಾಳು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ತೆಂಗಿನ ಮರಗಳನ್ನು ನಾಶ ಮಾಡಿರುವುದು   

ಕನಕಪುರ: ತಾಲ್ಲೂಕಿನ ಹೊಸ ಕಬ್ಬಾಳು ಗ್ರಾಮದಲ್ಲಿ ಮಂಗಳವಾ ಮತ್ತು ಬುಧವಾರ ಕಾಡಾನೆಗಳು ದಾಳಿ ನಡೆಸಿ ಫಸಲು ಬಿಡುತ್ತಿದ್ದ ತೆಂಗಿನ ಮರಗಳನ್ನು ನಾಶ ಗೊಳಿಸಿವೆ.

ಅಪ್ಪಾಜಿಗೌಡ ಎಂಬುವರಿಗೆ ಸೇರಿದ ಸುಮಾರು 10ಕ್ಕೂ ಹೆಚ್ಚು ತೆಂಗಿನ ಮರಗಳು ಕಾಡಾನೆ ದಾಳಿಯಿಂದ ನಾಶಗೊಂಡಿವೆ. ಹತ್ತಾರು ವರ್ಷ ಫಸಲು ಬಿಟ್ಟು ಜೀವನಕ್ಕೆ ಆಸರೆ ಆಗಬೇಕಿದ್ದ ತೆಂಗಿನ ಮರಗಳು ನಾಶವಾಗಿದ್ದು ತಮಗೆ ಅಪಾರ ನಷ್ಟವಾಗಿದೆ ಎಂದು ಅಪ್ಪಾಜಿಗೌಡರು ತಿಳಿಸಿದ್ದಾರೆ.

ಕಾಡಾನೆಗಳು ಈ ಭಾಗದಲ್ಲಿ ನಿರಂತರವಾಗಿ ದಾಳಿ ನಡೆಸಿ ರಾಗಿ, ಭತ್ತ, ಜೋಳ ಟೊಮೆಟೊ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಇಂದು ಫಸಲು ಬಿಡುತ್ತಿದ್ದ ತೆಂಗಿನ ಮರಗಳನ್ನು ನಾಶಗೊಳಿಸಿವೆ. ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ಪರಿಹಾರವನ್ನು ಕೊಡಬೇಕೆಂದು ಅರಣ್ಯ ಇಲಾಖೆಗೆ ದೂರು ನೀಡಿರುವ ಅವರು ಒತ್ತಾಯಿಸಿದ್ದಾರೆ.

ADVERTISEMENT

ಅರಣ್ಯ ಅಧಿಕಾರಿಗಳು ಹೊಸ ಕಬ್ಬಾಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಂದ ಬೆಳೆನಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಿ ಹೆಚ್ಚಿನ ಪರಿಹಾರ ಕೊಡಿಸಿಕೊಡುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.

ಕನಕಪುರ ಹೊಸ ಕಬ್ಬಾಳು ಗ್ರಾಮದಲ್ಲಿ ಅಪ್ಪಾಜಿಗೌಡರಿಗೆ ಸೇರಿದ ತೆಂಗಿನ ಸಸಿಗಳನ್ನು ನಾಶ ಮಾಡಿರುವುದು ಮಾಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.