ADVERTISEMENT

ಸಿರಿಧಾನ್ಯ ಬಳಕೆಗೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 7:45 IST
Last Updated 17 ಅಕ್ಟೋಬರ್ 2019, 7:45 IST
ಹಾರೋಹಳ್ಳಿಯಲ್ಲಿ ನಡೆದ ಬೇಕರಿ ತರಬೇತಿಯಲ್ಲಿ ಜಿಕೆವಿಕೆ ವಿದ್ಯಾರ್ಥಿನಿಯರು ಬೇಕರಿ ತಿನಿಸು ತಯಾರಿಸಿದರು
ಹಾರೋಹಳ್ಳಿಯಲ್ಲಿ ನಡೆದ ಬೇಕರಿ ತರಬೇತಿಯಲ್ಲಿ ಜಿಕೆವಿಕೆ ವಿದ್ಯಾರ್ಥಿನಿಯರು ಬೇಕರಿ ತಿನಿಸು ತಯಾರಿಸಿದರು   

ಮಾಗಡಿ: ‘ಸಿರಿಧಾನ್ಯ ಹಲವು ಪೋಷಕಾಂಶಗಳ ಆಗರ. ಅವುಗಳಿಂದ ತಯಾರಿಸುವ ತಿನಿಸುಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಬೇಕರಿ ತರಬೇತಿ ಘಟಕದ ಮುಖ್ಯಸ್ಥೆ ಡಾ.ಪ್ರಕೃತಿ ತಿಳಿಸಿದರು.

ಹಾರೋಹಳ್ಳಿಯಲ್ಲಿ ಜಿಕೆವಿಕೆ ವತಿಯಿಂದ ಗ್ರಾಮೀಣ ಕೃಷಿ ಕಾರ್ಯಕ್ರಮದಡಿ ನಡೆಯುತ್ತಿರುವ ಬೇಕರಿ ತರಬೇತಿಯಲ್ಲಿ ಅವರು ಮಾತನಾಡಿದರು.

‘ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿಗೆ ಸಮನಾದುದು ಮತ್ತೊಂದಿಲ್ಲ. ಎಲ್ಲ ವಿಧವಾದ ದ್ವಿದಳ ಧಾನ್ಯಗಳನ್ನು ಹುರಿದು, ಪುಡಿ ಮಾಡಿ, ಉಂಡೆ ಮಾಡಿಕೊಡುವ ಕಾಲ ಇಂದಿಲ್ಲ. ಗ್ರಾಮೀಣ ಮಹಿಳೆಯರು ಮನೆಯಲ್ಲಿಯೇ ಪುಟ್ಟದಾದ ಬೇಕರಿ ಮಾಡಿಕೊಂಡು ವಿವಿಧ ತಿನಿಸು, ಶಾವಿಗೆ, ಚಕ್ಕುಲಿ, ಕೋಡುಬಳೆ, ಹಪ್ಪಳ, ಉಪ್ಪಿನಕಾಯಿ, ಸಂಡಿಗೆ ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು’ ಎಂದರು.

ADVERTISEMENT

ಜಿಕೆವಿಕೆಯ ಸೆಲ್ವಿ ಮಾತನಾಡಿದರು. ವಿದ್ಯಾರ್ಥಿಗಳು, ಗ್ರಾಮದ ಮಹಿಳೆಯರು ಇದ್ದರು. ವಿದ್ಯಾರ್ಥಿನಿಯರು ವಿವಿಧ ಬಗೆಯ ಬೇಕರಿ ತಿನಿಸುಗಳನ್ನು ಮಾಡಿ ಪ್ರಾತ್ಯಕ್ಷಿಕೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.