ADVERTISEMENT

ಮಾಗಡಿಯ ಗೆಜಗಲ್‌ ಪಾಳ್ಯದ ಬಳಿ ಬೋನಿಗೆ ಬಿದ್ದ ಚಿರತೆಗಳು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 15:20 IST
Last Updated 26 ಏಪ್ರಿಲ್ 2020, 15:20 IST
ಮಾಗಡಿಯ ಗೆಜಗಲ್‌ ಪಾಳ್ಯದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಚಿರತೆ.
ಮಾಗಡಿಯ ಗೆಜಗಲ್‌ ಪಾಳ್ಯದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಚಿರತೆ.   

ಮಾಗಡಿ: ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನುಗಳಲ್ಲಿ ಎರಡು ಚಿರತೆ ಸೆರೆಯಾಗಿವೆ. ಸೋಲೂರು ಹೋಬಳಿಯ ಗೆಜಗಲ್‌ ಪಾಳ್ಯದ ಬಳಿ ಇಟ್ಟಿದ್ದ ಬೋನಿಗೆ 7 ವರ್ಷದ ಹೆಣ್ಣು ಚಿರತೆ ಮತ್ತು ತಾಂಡವನಪುರ ಬಳಿ ಇಟ್ಟಿದ್ದ ಬೋನಿಗೆ 10 ವರ್ಷದ ಗಂಡು ಚಿರತೆ ಬಿದ್ದಿವೆ ಎಂದು ಉಪ ಅರಣ್ಯ ಅಧಿಕಾರಿ ಚಿದಾನಂದ್‌ ತಿಳಿಸಿದರು.

ಮೂರು ದಿನಗಳ ಹಿಂದೆ ಎರಡು ಗ್ರಾಮಸ್ಥರ ಮನವಿಯ ಮೇರೆಗೆ ಬೋನು ಇಟ್ಟಿದ್ದೆವು. ಬೋನಿಗೆ ಚಿರತೆಗಳು ಬಿದ್ದಿರುವುದನ್ನು ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ತಿಳಿಸಿದರು. ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಟೆಂಪೊಗಳಲ್ಲಿ ಚಿರತೆಯ ಬೋನುಗಳನ್ನು ಕಚೇರಿಯ ಆವರಣಕ್ಕೆ ತರಲಾಯಿತು. ರಾತ್ರಿ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ವನಪಾಲಕರಾದ ಯತೀಶ್‌, ಸಿದ್ದರಾಜು, ಗೋವಿಂದ, ಚಂದ್ರು, ವಾಹನ ಚಾಲಕ ವೆಂಕಟೇಶ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.