ADVERTISEMENT

ಕನಕಪುರ: ಬಿಜೆಪಿಯಿಂದ ಸುಳ್ಳಿನ ರಾಜಕಾರಣ -ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 5:14 IST
Last Updated 3 ಅಕ್ಟೋಬರ್ 2021, 5:14 IST
ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು. ಆರ್‌. ಕೃಷ್ಣಮೂರ್ತಿ, ಎಂ.ಡಿ. ವಿಜಯದೇವು, ರವಿ, ಪುರುಷೋತ್ತಮ್‌, ವೆಂಕಟೇಶ್‌, ನಾಗರಾಜು, ಹರೀಶ್‌ ಉಪಸ್ಥಿತರಿದ್ದರು
ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು. ಆರ್‌. ಕೃಷ್ಣಮೂರ್ತಿ, ಎಂ.ಡಿ. ವಿಜಯದೇವು, ರವಿ, ಪುರುಷೋತ್ತಮ್‌, ವೆಂಕಟೇಶ್‌, ನಾಗರಾಜು, ಹರೀಶ್‌ ಉಪಸ್ಥಿತರಿದ್ದರು   

ಕನಕಪುರ: ‘ಪ್ರಪಂಚವೇ ಗಾಂಧೀಜಿಯನ್ನು ಅಹಿಂಸಾವಾದಿ ಮತ್ತು ಶಾಂತಿಯ ಆರಾಧಕರೆಂದು ಸ್ಮರಿಸುತ್ತಿದ್ದರೆ ಬಿಜೆಪಿಯವರು ಗಾಂಧಿಯನ್ನು ಕೊಂದ ಹಿಂಸೆಯ ಪ್ರತಿರೂಪವಾದ ನಾಥೂರಾಮ್‌ ಗೋಡ್ಸೆಯನ್ನು ಆರಾಧಿಸುತ್ತಾರೆ. ಅವರಿಗೆ ರಾಷ್ಟ್ರಪಿತನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಹೇಳಿದರು.

ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಲು ಹಲವು ರೀತಿಯಲ್ಲಿ ಹೋರಾಟ ನಡೆದಿವೆ. ಆದರೆ, ಅಂತಿಮವಾಗಿ ಗಾಂಧೀಜಿ ಅವರು ತಮ್ಮ ಅಹಿಂಸಾ ಮತ್ತು ಉಪವಾಸ ಸತ್ಯಾಗ್ರಹದ ಮೂಲಕವೇ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟಿದ್ದಾರೆ ಎಂದರು.

ADVERTISEMENT

ಆರ್‌ಎಸ್‌ಎಸ್‌ನವರು ದೇಶದಲ್ಲಿ ಧರ್ಮದ ಹೆಸರಿನಲ್ಲಿ ಸುಳ್ಳಿನ ರಾಜಕಾರಣ ಮಾಡಿ ದ್ವೇಷ ಬಿತ್ತುತ್ತಿದ್ದಾರೆ. ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿ ಜನರನ್ನು ಧಾರ್ಮಿಕವಾಗಿ ಭಾವುಕರನ್ನಾಗಿ ಮಾಡುತ್ತಿದ್ದಾರೆ. ರಾಮಮಂದಿರ ಕಟ್ಟಿ ಜೈಶ್ರೀರಾಮ್‌ ಎಂದರೆ ದೇಶದ ಜನರ ಕಷ್ಟ ದೂರವಾಗುತ್ತದೆಯೇ ಎಂದು
ಪ್ರಶ್ನಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆರ್‌. ಕೃಷ್ಣಮೂರ್ತಿ, ಎಂ.ಡಿ. ವಿಜಯದೇವು, ನಗರಸಭೆ ಮಾಜಿ ಅಧ್ಯಕ್ಷರಾದ ಮುಕ್ಬುಲ್‌ ಪಾಷ, ರಾಮಚಂದ್ರ, ಕೆ.ಎನ್‌. ದಿಲೀಪ್‌, ಮುಖಂಡರಾದ ಪುರುಷೋತ್ತಮ್‌, ರಾಯಸಂದ್ರ ರವಿ, ಅನಿಲ್‌, ಕೆ.ಎಂ. ರಾಜೇಂದ್ರ, ವೆಂಕಟೇಶ್‌, ಕಿರಣ್‌, ಧನಲಕ್ಷ್ಮಿ, ಲಕ್ಷ್ಮೀ ಗೋವಿಂದಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.