ADVERTISEMENT

ಕನಕಪುರ: ಹಾವು ಕಡಿತಕ್ಕೆ ಔಷಧಿ ನೀಡುವ ಕುಟುಂಬ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 1:05 IST
Last Updated 21 ಸೆಪ್ಟೆಂಬರ್ 2020, 1:05 IST
ಬೊಮ್ಮನಹಳ್ಳಿ ರಮೇಶ್‌
ಬೊಮ್ಮನಹಳ್ಳಿ ರಮೇಶ್‌   

ಕನಕಪುರ: ಹಾವು ಕಡಿತಕ್ಕೆ ಗಿಡಮೂಲಿಕೆ ಔಷಧಿ ನೀಡುವ ಕುಟುಂಬವೊಂದು ಹಲವು ಜನರ ಜೀವಕ್ಕೆ ವರದಾನ ನೀಡಿದೆ. ತಾಲ್ಲೂಕಿನ ಸಾತನೂರು ಹೋಬಳಿ ಬೊಮ್ಮನಹಳ್ಳಿ ಗ್ರಾಮದ ದೊಡ್ಡಣ್ಣ ಹಾವು ಕಡಿತಕ್ಕೆ ಔಷಧಿ ನೀಡಿ ಗುಣಪಡಿಸುವ ಕೆಲಸಕ್ಕೆ ಹೆಸರಾಗಿದ್ದರು. ಅವರು ಕಾಲವಾದ ನಂತರ ಅವರ ಮಕ್ಕಳಾದ ರಮೇಶ್‌, ನಾರಾಯಣ, ವೈರಮುಡಿ ಈ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ.

ಕಳೆದ 40 ವರ್ಷದಿಂದ ಈ ಕೆಲಸ ಮಾಡುತ್ತಿದ್ದು ಸಾವಿರಾರು ಮಂದಿ ಹಾವು ಕಡಿತದಿಂದ ಗುಣಮುಖರಾಗಿದ್ದಾರೆ ಎಂದು ರಮೇಶ್‌ ವಿವರಿಸಿದರು.

ರಾತ್ರಿ ಹಗಲೆನ್ನದೆ ಔಷಧಿ ನೀಡುವ ಮೂಲಕ ಈ ಭಾಗದಲ್ಲಿ ಇವರು ಹೆಸರಾಗಿದ್ದಾರೆ. ಅದಲ್ಲದೆ ಜಾನುವಾರುಗಳಿಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆಗಳ ಔಷಧಿ ನೀಡುತ್ತಾರೆ. ಅದೇ ರೀತಿ ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಚರ್ಮ ಕಾಯಿಲೆಗೂ ಗಿಡಮೂಲಿಕೆಗಳ ಔಷಧಿ ಕೊಡುತ್ತಾರೆ. ಇವರು ಮಾಡುವ ಈ ಸೇವಾ ಕಾರ್ಯಕ್ಕೆ ಯಾವುದೇ ನಿಗದಿತ ಹಣ ಪಡೆಯುವುದಿಲ್ಲ. ಸಮಸ್ಯೆ ಪರಿಹಾರ ನಂತರ ಸ್ವೀಕರಿಸುತ್ತಾರೆ.

ADVERTISEMENT

’ತಂದೆ ಮೊದಲಿನಿಂದಲೂ ಹಾವು ಕಡಿತಕ್ಕೆ ಔಷಧಿ ಕೊಡುತ್ತಿದ್ದರು. ಅವರ ಜತೆ ಜತೆಯಲ್ಲೇ ಔಷಧಿ ಕೊಡುವುದು ಕಲಿತೆ. ಧರ್ಮಕ್ಕಾಗಿ ಈ ಒಂದು ಸೇವೆ ಮಾಡುವಂತೆ ತಂದೆ ತಿಳಿಸಿದ್ದರು. ಅವರ ಆಸೆಯಂತೆ ಮುಂದುವರಿದಿದ್ದೇನೆ’ ಎನ್ನುತ್ತಾರೆ ರಮೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.