ಬಿಡದಿ: ಅವರಗೆರೆ ಗ್ರಾಮದಲ್ಲಿ ಭಾನುವಾರ ಕರ್ನಾಟಕ ರೈತ ಸಂಘದ ಶಾಖೆಯನ್ನು ರಾಜ್ಯಾಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಉದ್ಘಾಟಿಸಿದರು.
ನಂತರ ಸಂಘದ ರಾಜ್ಯ, ಜಿಲ್ಲೆ ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ರಾಜ್ಯ ಕಾರ್ಯದರ್ಶಿಯಾಗಿ ರವಿ ಕುಮಾರ್, ರಾಮನಗರ ಜಿಲ್ಲಾಧ್ಯಕ್ಷರಾಗಿ ಜಯರಾಮ್, ಉಪಾಧ್ಯಕ್ಷರಾಗಿ ಗುರುವಯ್ಯ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಇದೇ ವೇಳೆ ನೇಮಕ ಮಾಡಲಾಯಿತು.
ಶಾಖೆ ಉದ್ಘಾಟಿಸಿ ಮಾತನಾಡಿದ ತುಂಬೇನಹಳ್ಳಿ ಶಿವಕುಮಾರ್, ‘ಕಂದಾಯ ಹಾಗೂ ಭೂಮಾಪನ ಇಲಾಖೆಯಲ್ಲಿ ರೈತರಿಗೆ ಪಹಣಿ, ತಿದ್ದುಪಡಿ, ಸರ್ವೇ, ದಾಖಲಾತಿ ಕೆಲಸ ಮಾಡಿಕೊಡುವ ಅಧಿಕಾರಿಗಳಿಂದ ಕಿರುಕುಳ ಎದುರಾಗುತ್ತಿದೆ. ಈ ರೀತಿ ರೈತರಿಗೆ ಕಿರುಕುಳ ಮುಂದುವರೆದರೆ ಪ್ರತಿಭಟನೆ ಮಾಡಿ ಕಂದಾಯ ಹಾಗೂ ಭೂಮಾಪನ ಇಲಾಖೆಗೆ ಬೀಗ ಹಾಕಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.