ADVERTISEMENT

ನಿರ್ವಾಣಿ ಭಗವತಿ, ಅಣ್ಣಮ್ಮ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 5:34 IST
Last Updated 12 ಜನವರಿ 2024, 5:34 IST
ಮಾಗಡಿ ಪಟ್ಟಣದಲ್ಲಿ ನಿರ್ವಾಣಿ ಭಗವತಿದೇವಿ ಮತ್ತು ಅಣ್ಣಮ್ಮದೇವಿಯರು ಅರಾಧನಾ ಮಹೋತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು. ಸಮಾಜದ ಮಹಿಳೆಯರು, ಮುಖಂಡರು ಇದ್ದರು.
ಮಾಗಡಿ ಪಟ್ಟಣದಲ್ಲಿ ನಿರ್ವಾಣಿ ಭಗವತಿದೇವಿ ಮತ್ತು ಅಣ್ಣಮ್ಮದೇವಿಯರು ಅರಾಧನಾ ಮಹೋತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು. ಸಮಾಜದ ಮಹಿಳೆಯರು, ಮುಖಂಡರು ಇದ್ದರು.   

ಮಾಗಡಿ: ನಿರ್ವಾಣಿ ಭಗವತಿದೇವಿ ಹಾಗೂ ಅಣ್ಣಮ್ಮದೇವಿ ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ಉತ್ಸವ ಮೂರ್ತಿಗಳ ಅದ್ದೂರಿ ಮೆರವಣಿಗೆ ನಡೆಯಿತು.

ಕಲ್ಯಾಬಾಗಿಲು ಕುರುಹಿನಶೆಟ್ಟಿ ಸಮಾಜ ಮತ್ತು ನಿರ್ವಾಣಿ ಮಹಿಳಾ ಮಂಡಳಿ ಸಹಯೋಗದಲ್ಲಿ ನಡೆದ ಮೆರವಣಿಗೆ ಪಟ್ಟಣದ ಮುಖ್ಯಬೀದಿಗಳಲ್ಲಿ ಸಾಗಿತು. ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಿದವು. ಕುರುಹಿನ ಶೆಟ್ಟಿ ಸಮಾಜದ ಯುವಕ, ಯುವತಿಯರು ಮೆರಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. 

ಕುರುಹಿನ ಶೆಟ್ಟಿ ಸಂಘ ಹಾಗೂ ಸಿದ್ದಾರೂಢಾಶ್ರಮದ ಅಧ್ಯಕ್ಷ ಕದಂಬ ಗಂಗರಾಜು, ಪುರಸಭೆ ಸದಸ್ಯ ಎಂ.ಎನ್‌.ಮಂಜುನಾಥ್‌  ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.