ಕನಕಪುರ: ಗೌರಿ–ಗಣೇಶ ಹಬ್ಬವನ್ನು ಸಂಭ್ರಮ– ಸಡಗರದಿಂದ ಆಚರಿಸಲು ನಗರದ ಜನರು ಸಜ್ಜಾಗಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ವೇಳೆ ಗಗನಕ್ಕೇರಿದ್ದ ಹೂವು –ಹಣ್ಣು ಬೆಲೆ ಈಗ ಸ್ವಲ್ಪ ಇಳಿದಿದೆ. ಆದರೂ, ಸದಾ ಗಿಜಗುಡುತ್ತಿದ್ದ ಮಾರುಕಟ್ಟೆ ಈ ಬಾರಿ ಬಿಕೊ ಎನ್ನುತ್ತಿದೆ.
ನಗರದ ಎಂ.ಜಿ.ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ. ಹಬ್ಬದ ವಸ್ತುಗಳನ್ನು ಖರೀದಿಸಲು ರಸ್ತೆ ದಾಟಿ ಬರಬೇಕಿರುವುದರಿಂದ ವ್ಯಾಪಾರ ಆಗುತ್ತಿಲ್ಲವೆಂಬುದು ವ್ಯಾಪಾರಿಗಳ ಅಳಲಾಗಿದೆ.
ಅರ್ಕಾವತಿ ರಸ್ತೆಯಲ್ಲಿ ಹೂವಿನ ವ್ಯಾಪಾರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.