ಸ್ತಬ್ಧಚಿತ್ರ
ಚನ್ನಪಟ್ಟಣ: 75ನೇ ಗಣ ರಾಜ್ಯೋತ್ಸವ ಅಂಗವಾಗಿ ಜ.26ರಿಂದ ಫೆ.2ರವರೆಗೆ ನಗರ ಹಾಗೂ ತಾಲ್ಲೂಕಿನಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳ ಸ್ತಬ್ಧಚಿತ್ರ ಸಂಚರಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕಿ ಸರೋಜಮ್ಮ ತಿಳಿಸಿದ್ದಾರೆ.
ಸ್ತಬ್ಧಚಿತ್ರ ಜ.26 ಶುಕ್ರವಾರ ಮಧ್ಯಾಹ್ನ ವಂದಾರಗುಪ್ಪೆ ಗ್ರಾ.ಪಂ ಹಾಗೂ ತಗಚಗೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಜ.27ರಂದು ತಗಚಗೆರೆ, ನೀಲಸಂದ್ರ, ಹೊಂಗನೂರು, ವಿರುಪಾಕ್ಷಿಪುರ, ಬಿ.ವಿ.ಹಳ್ಳಿ, ಭೂಹಳ್ಳಿ, ಸಿಂಗರಾಜಿಪುರ, ಜ.28ರಂದು ಕೋಡಂಬಳ್ಳಿ, ಜೆ.ಬ್ಯಾಡರಹಳ್ಳಿ, ಎಲೇತೋಟದಹಳ್ಳಿ, ಇಗ್ಗಲೂರು, ಗ್ರಾ.ಪಂ ವಾಪ್ತಿಯಲ್ಲಿ ಸಂಚರಿಸಲಿದೆ.
ಜ.29ರಂದು ಸೋಗಾಲ, ಹಾರೋಕೊಪ್ಪ, ಬಾಣಗಹಳ್ಳಿ, ಅಕ್ಕೂರು, ಸುಳ್ಳೇರಿ, ಮಳೂರುಪಟ್ಟಣ, ಜ.30ರಂದು, ಕೂಡ್ಲೂರು, ಮಳೂರು, ಚಕ್ಕರೆ, ಮತ್ತೀಕೆರೆ, ಮುದಗೆರೆ, ಜ.31ರಂದು ಎಚ್.ಬ್ಯಾಡರಹಳ್ಳಿ, ಮುದಗೆರೆ, ಎಂ.ಬಿ.ಹಳ್ಳಿ, ಬೇವೂರು, ಮಾಕಳಿ, ನಾಗವಾರ, ಫೆ.1ರಂದು ದಶವಾರ, ನಾಗವಾರ, ಮೈಲನಾಯ್ಕನಹಳ್ಳಿ, ತಿಟ್ಟಮಾರನಹಳ್ಳಿ, ರಾಂಪುರ ಗ್ರಾ.ಪಂ ವ್ಯಾಪ್ತಿಯಲ್ಲಿ, ಫೆ.2ರಂದು ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ಸಂಚರಿಸಿ ನಂತರ ಮುಕ್ತಾಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.