ADVERTISEMENT

ಮಾಗಡಿ: ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಇಂದು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:25 IST
Last Updated 1 ಸೆಪ್ಟೆಂಬರ್ 2025, 2:25 IST
ಮಾಗಡಿ ಕೋಟೆ ಮೈದಾನದಲ್ಲಿ ನಡೆಯುವ ಹಿಂದೂ ಮಹಾ ಗಣಪತಿ ಮಹೋತ್ಸವದ 12 ಎತ್ತರದ ಬೃಹತ್ ಗಣಪತಿ ಪ್ರತಿಮೆ.
ಮಾಗಡಿ ಕೋಟೆ ಮೈದಾನದಲ್ಲಿ ನಡೆಯುವ ಹಿಂದೂ ಮಹಾ ಗಣಪತಿ ಮಹೋತ್ಸವದ 12 ಎತ್ತರದ ಬೃಹತ್ ಗಣಪತಿ ಪ್ರತಿಮೆ.   

ಮಾಗಡಿ: ಪಟ್ಟಣದ ಕೋಟೆ ಮೈದಾನದಲ್ಲಿ ಸೋಮವಾರ ಮೂರನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಗಂಗಾ ಪೂಜೆಯೊಂದಿದೆ ಚಾಲನೆ ಸಿಗಲಿದೆ.

ಭಾನುವಾರ ಕೋಟೆ ಮೈದಾನಕ್ಕೆ ಗಣಪತಿಯನ್ನು ಬೈಕ್ ರ‍್ಯಾಲಿಯಲ್ಲಿ ತರಲಾಯಿತು. ಏಳು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ತಿಂಡಿ ಸ್ಟಾಲ್ ಹಾಗೂ ಮನರಂಜನಾ, ಆಟದ ಪಾರ್ಕ್‌ ನಿರ್ಮಾಣ ಮಾಡಲಾಗಿದೆ. 

ಸೆ.1 ರಂದು ಸಂಜೆ ಯೋಗ ಪುನೀತ ಕೇಂದ್ರ ಮತ್ತು ನಾದ ನಿನಾದ ಡ್ಯಾನ್ಸ್ ಅಕಾಡೆಮಿಯಿಂದ ಗಾಯನ ಮತ್ತು ನೃತ್ಯ ಪ್ರದರ್ಶನ, ಸೆ.2 ರಂದು ನವ ದುರ್ಗೆಯರ ಸಮಾಗಮ, ಸಿದ್ದಗಂಗಾ ವೃತ್ತಿ ಶಾಲೆಯಿಂದ ಮಲ್ಲಗಂಬ ನೃತ್ಯ ಪ್ರದರ್ಶನ ಮತ್ತು ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸೆ‌.3 ರಂದು ಸಂಜೆ ಗಣಪತಿಗೆ 108 ಗ್ರಾಮಗಳ 108 ರೀತಿಯ ವಿಶೇಷ ನೈವೇದ್ಯ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ADVERTISEMENT

ಮಾಗಡಿ ಕ್ಲಬ್ ವತಿಯಿಂದ ಕುಡ್ಲಕ್ವಿನ್ಸ್ ಮಂಗಳೂರು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.4 ರಂದು ನವೀನ್ ಸರ್ಜಾ ಮ್ಯೂಸಿಕಲ್ ನೈಟ್, ಸೆ.5 ರಂದು ಸಂಜೆ ಯುವಾಸ್ ವೈಬಲ್ ಮ್ಯೂಸಿಕಲ್ ನೈಟ್, ಸೆ.6 ರಂದು ದೀಪದೂತ ಅಲಂಕಾರ ಎಫ್ ಎಫ್ ಡಿ ಡಾನ್ಸ್ ಸ್ಟುಡಿಯೊದಿಂದ ನೃತ್ಯ ಪ್ರದರ್ಶನ ಮತ್ತು ಭಗತ್ ಸಿಂಗ್ ಕರಾಟೆ ಅಕಾಡೆಮಿಯಿಂದ ಸಾಹಸ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಾಗಡಿ ಕೋಟೆ ಮೈದಾನದಲ್ಲಿ ಭಾನುವಾರ ಮೂರನೇ ವರ್ಷದ ಅದ್ದೂರಿ ಹಿಂದೂ ಮಹಾ ಗಣಪತಿ ಮಹೋತ್ಸವಕ್ಕೆ ದೊಡ್ಡ ವೇದಿಕೆಗಳು ಸಿದ್ಧವಾಗಿರುತ್ತಿರುವುದು.

ಸೆ.7 ರಂದು ಶೋಭಾಯಾತ್ರೆ ಹಮ್ಮಿಕೊಂಡಿದ್ದು ಮಾಗಡಿ ಪ್ರಮುಖ ಬೀದಿಗಳಲ್ಲಿ ಸಿಡಿಮದ್ದು, ಕಲಾತಂಡಗಳೊಂದಿಗೆ ಗೌರಮ್ಮನ ಕೆರೆಯಲ್ಲಿ  ಗಣೇಶ ವಿಸರ್ಜನೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.