ADVERTISEMENT

ಗೋಪಹಳ್ಳಿ: ಗ್ರಾ.ಪಂ. ಉಪಾಧ್ಯಕ್ಷರಾಗಿ ಹುಲಿಯಪ್ಪ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:06 IST
Last Updated 23 ಆಗಸ್ಟ್ 2025, 2:06 IST
ಬಿಡದಿ ಹೋಬಳಿಯ ಗೋಪಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ. ಹುಲಿಯಪ್ಪ ಅವರನ್ನು, ಪಂಚಾಯಿತಿ ಅಧ್ಯಕ್ಷೆ, ಸದಸ್ಯರು ಹಾಗೂ ಮುಖಂಡರು ಸನ್ಮಾನಿಸಿದರು
ಬಿಡದಿ ಹೋಬಳಿಯ ಗೋಪಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ. ಹುಲಿಯಪ್ಪ ಅವರನ್ನು, ಪಂಚಾಯಿತಿ ಅಧ್ಯಕ್ಷೆ, ಸದಸ್ಯರು ಹಾಗೂ ಮುಖಂಡರು ಸನ್ಮಾನಿಸಿದರು   

ಬಿಡದಿ (ರಾಮನಗರ): ಹೋಬಳಿಯ ಗೋಪಹಳ್ಳಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಬಿ.ಕೆ. ಹುಲಿಯಪ್ಪ ಆಯ್ಕೆಯಾದರು. ಆರ್.ಎ. ಗೋಪಾಲ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ನಡೆಯಿತು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೋಪಹಳ್ಳಿ ಸದಸ್ಯ ಹುಲಿಯಪ್ಪ ಹಾಗೂ ಮಂಚೇಗೌಡನಪಾಳ್ಯದ ಜೆಡಿಎಸ್ ಬೆಂಬಲಿತ ಸದಸ್ಯ ವಿನೋದ್‍ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಒಟ್ಟು 26 ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ 15 ಹಾಗೂ ಜೆಡಿಎಸ್ ಬೆಂಬಲಿತ 11 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು.

ಅಂತಿಮವಾಗಿ ಹುಲಿಯಪ್ಪ 13 ಮತಗಳನ್ನು ಪಡೆದು ಜಯ ಗಳಿಸಿದರು. ವಿನೋದ್‍ಕುಮಾರ್ 11 ಮತಗಳನ್ನು ಪಡೆದು ಪರಾಭವಗೊಂಡರು. 2 ಮತ ತಿರಸ್ಕೃತಗೊಂಡವು. ಕೈ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ADVERTISEMENT

ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜು, ಬಿಎಂಐಸಿ ನಿರ್ದೇಶಕ ರಮೇಶ್ ಅಬ್ಬನಕುಪ್ಪೆ, ಪಂಚಾಯಿತಿ ಅಧ್ಯಕ್ಷೆ ಸರೋಜ ನಾಗರಾಜು, ಸದಸ್ಯರಾದ ಸಿ.ಪಿ. ಪ್ರಕಾಶ್, ಆರ್.ಎ.ಗೋಪಾಲ್, ಶಿವಲಿಂಗಯ್ಯ, ಗೋಪಾಲಗೌಡ, ರಾಮಚಂದ್ರ, ತಿಮ್ಮಯ್ಯ, ಶ್ರೀಕಂಠಯ್ಯ, ಕವಿತಾ, ರಾಧಾಕುಮಾರ್, ಸರೋಜನಾಗರಾಜು, ಸುಜಾತತಾಯಪ್ಪ, ನೀಲಗೋವಿಂದಪ್ಪ, ಅನುಸೂಯ, ಮಂಜುಳಾ ತಿಮ್ಮಪ್ಪ, ಪಿಡಿಒ ಲೋಕೇಶ್, ಮುಖಂಡ ಉಮಾಶಂಕರ್, ರಾಮನಹಳ್ಳಿ ಹಾಲಿನಡೇರಿ ಅಧ್ಯಕ್ಷ ಅನಿಲ್‍ಕುಮಾರ್ ಸೇರಿದಂತೆ ಹಲವರು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.