ADVERTISEMENT

ಅವ್ವೇರಹಳ್ಳಿಯಲ್ಲಿ ಗೋಪೂಜೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 7:18 IST
Last Updated 8 ನವೆಂಬರ್ 2021, 7:18 IST
ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ನಡೆದ ಗೋಪೂಜೆ ಕಾರ್ಯಕ್ರಮದಲ್ಲಿ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ತಹಶೀಲ್ದಾರ್ ವಿಜಯಕುಮಾರ್, ದೇವಾಲಯದ ಆಡಳಿತಾಧಿಕಾರಿ ಎಸ್.ಜೆ. ಯೇಸುರಾಜ್ ಮತ್ತಿತರರು ಪಾಲ್ಗೊಂಡಿದ್ದರು
ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ನಡೆದ ಗೋಪೂಜೆ ಕಾರ್ಯಕ್ರಮದಲ್ಲಿ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ತಹಶೀಲ್ದಾರ್ ವಿಜಯಕುಮಾರ್, ದೇವಾಲಯದ ಆಡಳಿತಾಧಿಕಾರಿ ಎಸ್.ಜೆ. ಯೇಸುರಾಜ್ ಮತ್ತಿತರರು ಪಾಲ್ಗೊಂಡಿದ್ದರು   

ರಾಮನಗರ: ಇಲ್ಲಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ಗೋಪೂಜೆ ನಡೆಯಿತು.

ಬೆಟ್ಟದ ತಳಬಾಗದ ರೇಣುಕಾಂಭ ದೇವಾಲಯದಲ್ಲಿ ಶುಕ್ರವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ನೆರವೇರಿತು. ಗೋವು ಮತ್ತು ಅದರ ಕರುವನ್ನು ದೇವಾಲಯಕ್ಕೆ ಕರೆತಂದು, ಶುಚಿ ಗೊಳಿಸಿ, ಅರಿಸಿನ, ಕುಂಕುಮ, ವಿಭೂತಿ, ಹೂವುಗಳಿಂದ ಸಿಂಗರಿಸಿ ಹೊಸ ಪೂಜಿಸಲಾಯಿತು. ಈ ಸಂದರ್ಭ ಭಕ್ತರಿಗೆ ಬಾಳೆಹಣ್ಣು ರಸಾಯನ, ಪ್ರಸಾದ ವಿನಿಯೋಗ
ನಡೆಯಿತು.

ರೇವಣಸಿದ್ದೇಶ್ವರಬೆಟ್ಟ ದಾಸೋಹ ಮಠದ ಕಿರಿಯಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ರಾಮನಗರ ತಹಶೀಲ್ದಾರ್ ವಿಜಯಕುಮಾರ್, ದೇವಾಲಯದ ಆಡಳಿತಾಧಿಕಾರಿ ಎಸ್.ಜೆ. ಯೇಸುರಾಜ್, ಧಾರ್ಮಿಕ ಪರಿಷತ್ ಸದಸ್ಯ ಚಂದ್ರಶೇಖರ್, ಮುಖಂಡರಾದ ಅವ್ವೇರಹಳ್ಳಿ ಶಿವಲಿಂಗಯ್ಯ, ಕಂಟ್ರಾಕ್ಟರ್ ತಮ್ಮಣ್ಣ, ರಾಜಸ್ವ ನಿರೀಕ್ಷಕ ಪುಟ್ಟರಾಜು, ಗ್ರಾಮ ಲೆಕ್ಕಿಗ ಮಂಜುನಾಥ್, ದೇವಾಲಯದ ಪ್ರಧಾನ ಅರ್ಚಕ ಎಸ್. ವಿಜಯಕುಮಾರ್, ಅರ್ಚಕ ವಿ. ಮೂರ್ತಿ, ಎ.ಸಿ. ಮಂಜುನಾಥ್, ಪುರೋಹಿತ ಎಸ್. ರುದ್ರೇಶ್
ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.