ADVERTISEMENT

ಆರ್‌ಎಚ್‌ಎಸ್ ಶಾಲೆಯಲ್ಲಿ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:30 IST
Last Updated 19 ಆಗಸ್ಟ್ 2025, 2:30 IST
ಕನಕಪುರದ ಸಾತನೂರು ಆರ್‌ಎಚ್ಎಸ್ ಶಾಲೆಯ 1999 –2000ನೇ ಸಾಲಿನ ವಿದ್ಯಾರ್ಥಿಗಳು ಗುರುಗಳಿಗೆ ಗುರುವಂದನೆ ಸಲ್ಲಿಸಿದರು
ಕನಕಪುರದ ಸಾತನೂರು ಆರ್‌ಎಚ್ಎಸ್ ಶಾಲೆಯ 1999 –2000ನೇ ಸಾಲಿನ ವಿದ್ಯಾರ್ಥಿಗಳು ಗುರುಗಳಿಗೆ ಗುರುವಂದನೆ ಸಲ್ಲಿಸಿದರು   

ಕನಕಪುರ: ತಾಲ್ಲೂಕಿನ ಸಾತನೂರಿನ ರೂರಲ್ ಎಜುಕೇಶನ್ ಸೊಸೈಟಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗುರುವಂದನೆ ಮತ್ತು ರಜತಾ ಮಹೋತ್ಸವ ಭಾನುವಾರ ನಡೆಯಿತು.

ಆರ್‌ಎಚ್ಎಸ್ ಶಾಲೆಯ 1999-2000ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ಗುರುವಂದನೆ ಸಲ್ಲಿಸಿ ಶಾಲೆಯ ರಜತ ಮಹೋತ್ಸವ ಆಚರಿಸಿದರು.

ಶಿಕ್ಷಕರನ್ನು ಬೆಳ್ಳಿ ರಥದಲ್ಲಿ ಸಾತನೂರು ಸಂತೆಮಾಳದ ಸರ್ಕಲ್‌ನಿಂದ ವೇದಿಕೆ ಕಾರ್ಯಕ್ರಮದವರೆಗೂ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಕರೆತಂದರು. ನಂತರ ಗುರುಗಳನ್ನು ಸನ್ಮಾನಿಸಿದರು.

ADVERTISEMENT

ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಶಿಕ್ಷಣ ದೊರಕಿಸಬೇಕೆಂಬ ಉದ್ದೇಶದಿಂದ ಆರ್‌ಇಎಸ್‌ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ನಂತರ ಶಾಲೆಯಿಂದ ಪಿಯು, ಪದವಿವರೆಗೂ ವಿಸ್ತರಿಸಲಾಗಿದೆ ಎಂದರು.

ಆರ್‌ಇಎಸ್ ಸಂಸ್ಥೆಯಲ್ಲಿ 1999–2000ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಮುಖ ಹುದ್ದೆಗಳಲ್ಲಿರುವುದು ಸಂತಸದ ವಿಷಯ ಎಂದರು.

ಕರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ 25 ವರ್ಷಗಳ ಹಿಂದೆ ವ್ಯಾಸಂಗ ಮಾಡುತ್ತಿದ್ದ 280 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಎಲ್ಲರೂ ಒಂದೆಡೆ ಸೇರಿ ಹಿಂದಿನ ನೆನಪುಗಳನ್ನು ಮರುಕಳಿಸಿದರು.

ಸಾತನೂರು ನಾಗರಾಜು, ಸಾತನೂರು ಚಂದ್ರು, ಕಾಡಳ್ಳಿ ರಮೇಶ್, ಕೆ.ಪಾಳ್ಯ ಸುರೇಶ್ ಚಾರ್, ದೇವಿರಮ್ಮನ ದೊಡ್ಡಿ ಯೋಗೇಶ್, ಸಾತನೂರು ಗಣೇಶ್, ಕೆಮ್ಮಾಳೆ ರಘು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.