ADVERTISEMENT

ಹಾರೋಹಳ್ಳಿ: ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ನಿಗದಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:29 IST
Last Updated 18 ಫೆಬ್ರುವರಿ 2026, 5:29 IST
ಹಾರೋಹಳ್ಳಿ ತಾಲೂಕು ಕಚೇರಿ
ಹಾರೋಹಳ್ಳಿ ತಾಲೂಕು ಕಚೇರಿ   

ಹಾರೋಹಳ್ಳಿ: ಕಳೆದ 5 ವರ್ಷಗಳಿಂದಲೂ ಗ್ರಾ.ಪಂ ಪಿತೃಗಳಿಲ್ಲದೆ ಸೊರಗಿದ್ದ ಗ್ರಾಮ ಪಂಚಾಯಿತಿಗಳಿಗೆ ಟಾನಿಕ್ ನೀಡುವ ಕೆಲಸಕ್ಕೆ ಸರಕಾರ ಮುಂದಾಗಿದ್ದು, ತಾಲೂಕಿನ 4 ಗ್ರಾಮ ಪಂಚಾಯಿತಿಗಳಿಗೆ ಸದಸ್ಯ ಸ್ಥಾನಗಳನ್ನು ನಿಗಧಿಪಡಿಸಿ ಸರಕಾರ ಆದೇಶ ಹೊರಡಿಸಿದೆ.

ಕಳೆದ 5 ವರ್ಷದ ಹಿಂದೆ ಹಾರೋಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆ ಸಮಯದಲ್ಲಿ ಟಿ.ಹೊಸಹಳ್ಳಿಗ್ರಾ.ಪಂ,ಕೊಳ್ಳಿಗನಹಳ್ಳಿ ಗ್ರಾ.ಪಂ,ಕಗ್ಗಲಹಳ್ಳಿ ಗ್ರಾ.ಪಂ ಮತ್ತು ದ್ಯಾವಸಂದ್ರ ಗ್ರಾ.ಪಂನ ಕೆಲವು ಗ್ರಾಮಗಳನ್ನು ಪಟ್ಟಣ ಪಂಚಯಿತಿ ವ್ಯಾಪ್ತಿಗೆ ಸೇರಿಸಲಾಗಿತ್ತು ಅಂದಿನಿಂದ ಇಲ್ಲಿಯವರೆಗೂ ಯಾವುದೇ ರೀತಿಯ ಚಟುವಟಿಕೆಗಳು ಜರುಗಿರಲಿಲ್ಲ ಇದೀಗ 4 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನವನ್ನು ನಿಗಧಿಪಡಿಸಿ ಆದೇಶ ಹೊರಡಿಸಿದ್ದು ಚುನಾವಣೆಯ ಚಟುವಟಿಕೆಗಳು ಗರಿಗೆದರಲಿವೆ.

ಪುರಸಭೆಗೆ ಸೇರಿದ ಗ್ರಾಮಗಳು: ಹಾರೋಹಳ್ಳಿ ಪಟ್ಟಣ ಪಂಚಾಯಿತಿಯ ಪುರಸಭೆಗೆ ಮೇಲ್ದರ್ಜೆಗೇರಿಸಿ ಟಿ.ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಯ ನರಸಿಂಹಯ್ಯನದೊಡ್ಡಿ, ನರಸಿಂಹಯ್ಯನದೊಡ್ಡಿ, ಕಗ್ಗಲಹಳ್ಳಿ ಗ್ರಾ.ಪಂನ ಮುಡೇನಹಳ್ಳಿ, ಕೆಬ್ಬೆದೊಡ್ಡಿ, ಗಬ್ಬಾಡಿ ಕಾವಲ್, ಹೊಸಗಬ್ಬಾಡಿ, ಹಳೆಗಬ್ಬಾಡಿ, ಪರುವಯ್ಯನಪಾಳ್ಯ, ಬಡೇಸಾಬರದೊಡ್ಡಿ, ಹೊಸಕೋಟೆ, ಪಿರಮಿಡ್ ವ್ಯಾಲಿ, ಕೊಳ್ಳಿಗನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮೇಡಮಾರನಹಳ್ಳಿ, ರಾಮೇಗೌಡನದೊಡ್ಡಿ, ರಾಮಸಾಗರ, ಸಂಬಯ್ಯನದೊಡ್ಡಿ, ದಾಸೇಗೌಡನದೊಡ್ಡಿ, ದ್ಯಾವಸಂದ್ರ ಗ್ರಾ.ಪಂ ವ್ಯಾಪ್ತಿಯ ಭೀಮಸಂದ್ರ, ಅಂಚಿಬಾರೆ, ಚುಳುಕನಕೆರೆ ಕಾವಲ್, ದ್ಯಾವಸಂದ್ರ, ಗ್ರಾಮಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿ ಆದೇಶ ಹೊರಡಿಸಲಾಗಿತ್ತು.

ADVERTISEMENT

ಆಡಳಿತಾಧಿಕಾರಿಗಳಿಂದ ಆಡಳಿತ; ಕಳೆದ 5 ವರ್ಷಗಳಿಂದಲೂ ಪುರಸಭೆ ಒಳಗೊಂಡಂತೆ ಉಳಿದ 4 ಗ್ರಾಮ ಪಂಚಾಯಿತಿಗಳಲ್ಲೂ ಅಧಿಕರಿಗೇ ಆಡಳಿತ ನಡೆಸುತ್ತಿದ್ದರು ಇದೀಗ 4 ಗ್ರಾ.ಪಂಗಳಿಗೆ ಸದಸ್ಯ ಸ್ಥಾನಗಳನ್ನು ನಿಗಧಿಪಡಿಸಲಾಗಿದ್ದು ಅಧಿಕಾರಿಗಳ ಆಡಳಿತ ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿ ಸದಸ್ಯರ ಸ್ಥಾನಗಳ ನಿಗದಿ ಮಾಡಲಾಗಿದೆ.

ಹೊಸ ಗ್ರಾ.ಪಂ ಅಸ್ತಿತ್ವಕ್ಕೆ; ಇನ್ನು ಈ ಹಿಂದೆ ದ್ಯಾವಸಂದ್ರ ಗ್ರಾಮವು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವುದರಿಂದ ದ್ಯಾವಸಂದ್ರ ಗ್ರಾಮ ಪಂಚಾಯಿತಿ ಅಸ್ತಿತ್ವ ಕಳೆದುಕೊಂಡಿದೆ. ಇದೀಗ ಕೋನಸಂದ್ರ ಗ್ರಾಮ ಪಂಚಾಯಿತಿಯು ಅಸ್ತಿತ್ವಕ್ಕೆ ಬಂದಿದ್ದು, ಕೋನಸಂದ್ರ ಗ್ರಾಮ ಪಂಚಾಯಿತಿಯು 8000 ಜನಸಂಖ್ಯೆಗಳನ್ನೊಳಗೊಂಡಂತೆ 27 ಹಳ್ಳಿಗಳನ್ನು ಒಳಗೊಂಡಿದೆ.

ಜನರ ನಿಟ್ಟುಸಿರು: ಕಳೆದ 5 ವರ್ಷಗಳಿಂದ 4 ಗ್ರಾಮಪಂಚಾಯತಿಗಳಿಗೆ ಚುನಾವಣೆಗಳು ನಡೆಯದೇ ಗ್ರಾಮೀಣ ಭಾಗದ ಅಭಿವೃದ್ದಿ ಕುಂಠಿತವಾಗಿದ್ದು ಈಗ ಸದಸ್ಯರ ಸಂಖ್ಯೆ ನಿಗದಿ ಆಗಿರುವುದರಿಂದ ಆದಷ್ಟು ಬೇಗನೆ ಚುನಾವಣೆ ನಡೆದು ಅಭಿವೃದ್ದಿಗೆ ವೇಗ ದೊರೆಯುವ ಸಾಧ್ಯತೆಗಳಿವೆ ಎಂದು ಗ್ರಾಮೀಣ ಭಾಗದ ಜನರು ನಿಟ್ಟುಸಿರುವ ಬೀಡುವಂತಾಗಿದೆ .

ಹಾರೋಹಳ್ಳಿ ಪುರಸಭೆ ವ್ಯಾಪ್ತಿಗೆ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳು ಸೇರ್ಪಡೆಯಾಗಿದ್ದು ಈಗ ಅ ಗ್ರಾಮಪಂಚಾಯತಿಗಳ ಸದಸ್ಯರ ಸ್ಥಾನಗಳು ಅಭಿವೃಧ್ದಿಗೆ ವೇಗ ದೊರೆತು ಸಾರ್ವಜನಿಕರಿಗೆ ಅನುಕೂಲವಾಗುವುದು
ಅಪೂರ್ವ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಹಾರೋಹಳ್ಳಿ
ಹಾರೋಹಳ್ಳಿ ಪಟ್ಟಣ ಪಂಚಾಯತ್ ಅಗಿ ಈಗ ಪುರಸಭೆಯಾಗಿದೆ ಕಳೆದ 5 ವರ್ಷಗಳಿಂದ ಅಭಿವೃದ್ದಿ ಕೆಲಸಗಳು ನಡೆಯದೇ ಜನರು ತೊಂದರೆ ಅನುಭವಿಸುತ್ತಿದ್ದು ಈಗ ಅದಕ್ಕೆ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ
ಶ್ರೀನಿವಾಸ್ ಟಿ. ಹೊಸಹಳ್ಳಿ ಗ್ರಾಮ ಪಂಚಾಯತಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.