
ಹಾರೋಹಳ್ಳಿ: ತಾಲ್ಲೂಕಿನ ರಸ್ತೆ ಜಕ್ಕಸಂದ್ರ ಸಮೀಪದ ಮರಿಗೌಡನದೊಡ್ಡಿಯ ಯುವಕನೊಬ್ಬ ತಂದೆ ಸಾವಿನಿಂದ ಮನನೊಂದು ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನ ಸಾವಿನ ಸುದ್ದಿ ಕೇಳಿದ ಆತನ ತಾಯಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಅವರು ಅಪಾಯದಿಂದ ಪಾರಾಗಿದ್ದಾರೆ.
ಯಡುವನಹಳ್ಳಿ ಬಳಿಯ ಜೈನ್ ಕಾಲೇಜು ಸಮೀಪದ ಮರಕ್ಕೆ ವಿಶಾಲ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಕೆಲವು ತಿಂಗಳ ಹಿಂದೆ ವಿಶಾಲ್ ಅಪಘಾತಕ್ಕೊಳಗಾಗಿದ್ದ. ಆ ವೇಳೆ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗಿತ್ತು. ಇದರಿಂದ ಬೇಸರಗೊಂಡಿದ್ದ. ಅಲ್ಲದೆ, ಅದಾದ ಕೆಲವು ದಿನಗಳ ಬಳಿಕ ವಿಶಾಲ್ ತಂದೆಯೂ ನಿಧನರಾಗಿದ್ದರು. ಇದರಿಂದ ಆತ ಸಂಪೂರ್ಣ ಕುಗ್ಗಿ ಹೋಗಿದ್ದ.
ಸೋಮವಾರ ರಾತ್ರಿ ಸ್ನೇಹಿತನಿಗೆ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದ ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತ ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.