ರಾಮನಗರ: ಜಿಲ್ಲೆಯಾದ್ಯಂತ ಮಂಗಳವಾರಬೆಳಗಿನ ಜಾವ ವರುಣ ಆರ್ಭಟಿಸಿದ್ದು, ಉತ್ತಮ ಮಳೆ ಸುರಿದಿದೆ.
ಮಳೆಯಿಂದಾಗಿ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದೆ. ರಾಮನಗರ ತಾಲ್ಲೂಕಿನ ಬೈಚೋಹಳ್ಳಿಯಲ್ಲಿ ಹಲವು ಮನೆಗಳ ಜಂಕ್ ಶೀಟ್ ಛಾವಣಿ ಹಾರಿಹೋಗಿದೆ. ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.
ತಾಳನಕುಪ್ಪೆ ಗ್ರಾಮದಲ್ಲಿ ಬಾಳೆ ಬೆಳೆ ನೆಲಕ್ಕೆ ಒರಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದ್ದು, ನಷ್ಟದ ಅಂದಾಜು ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.