ADVERTISEMENT

ಮನೆ ತಾರಸಿಯಲ್ಲಿ ಬೆಳೆದ ಹೈಡ್ರೋ ಗಾಂಜಾ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 19:38 IST
Last Updated 27 ಸೆಪ್ಟೆಂಬರ್ 2021, 19:38 IST
ಮನೆಯ ತಾರಸಿಯಲ್ಲಿ ಗಾಂಜಾ ಬೆಳೆದಿರುವುದು
ಮನೆಯ ತಾರಸಿಯಲ್ಲಿ ಗಾಂಜಾ ಬೆಳೆದಿರುವುದು   

ಬಿಡದಿ: ಇಲ್ಲಿನ ಈಗಲ್‌ಟನ್ ರೆಸಾರ್ಟ್‌ ಸಮೀಪ ಇರುವ ವಿಲ್ಲಾವೊಂದರ ತಾರಸಿಯಲ್ಲಿ ಹೈಡ್ರೋ ಗಾಂಜಾ ಗಿಡಗಳನ್ನು ಬೆಳೆದಿದ್ದ ಇರಾನ್‌ ಮೂಲದ ಜಾವಿದ್ ರುಸ್ತಂಪುರಿ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯ ತಾರಸಿ ಹಾಗೂ ಕೊಠಡಿಯಲ್ಲಿದ್ದ 150ಕ್ಕೂ ಹೆಚ್ಚು ಗಿಡಗಳು ಹಾಗೂ ರಾಸಾಯನಿಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾರುಕಟ್ಟೆಯಲ್ಲಿ ಇವುಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟಿದೆ ಎಂದು ಹೇಳಲಾಗಿದೆ.

ಆನ್‌ಲೈನ್‌ ಮೂಲಕ ಬಿತ್ತನೆ ಬೀಜಗಳನ್ನು ತರಿಸಿಕೊಂಡಿದ್ದ ಆರೋಪಿ ಕಳೆದ ಒಂದೂವರೆ ವರ್ಷದಿಂದ ಇಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರು ಡಿ.ಜೆ. ಹಳ್ಳಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಆತ ಬಿಡದಿಯಲ್ಲಿ ಗಿಡಗಳನ್ನು ಬೆಳೆದಿದ್ದಾಗಿ ಸತ್ಯ ಹೇಳಿದ್ದಾನೆ.

ADVERTISEMENT

ಸೋಮವಾರ ಆರೋಪಿಯೊಂದಿಗೆ ಆತನ ಬಿಡದಿ ನಿವಾಸಕ್ಕೆ ಬಂದ ಪೊಲೀಸರು ಗಿಡಗಳನ್ನು ವಶಕ್ಕೆ ಪಡೆದು ಕೊಂಡೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.