
ಮಾಗಡಿ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶಾಸಕ ಎಚ್.ಸಿ. ಬಾಲಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಕೋಟಿ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ನವೀಕರಿಸಲಾಗಿದೆ. ಆಸ್ಪತ್ರೆ ನಿಧಿಗೆ ₹25 ಲಕ್ಷ ದೇಣಿಗೆ ನೀಡುತ್ತೇನೆ. ಶ್ರೀಮಂತರು ಉದಾರವಾಗಿ ದೇಣಿಗೆ ನೀಡಬೇಕು. ಆಸ್ಪತ್ರೆಯ ಇತರೆ ಖರ್ಚುಗಳಿಗೆ ನಿಧಿ ಅನುಕೂಲವಾಗಲಿದೆ. ಸ್ವಚ್ಛತೆ ಮತ್ತು ಔಷಧಿ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದೇನೆ. ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡ ಕಟ್ಟಿಸಲು ತೊಂದರೆ ಕೊಡುವವರಿಗೆ ಬುದ್ಧಿ ಹೇಳಬೇಕು ಎಂದರು.
ಸ್ವಚ್ಛತಾ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ನಾವೇ ವೇತನ ಕೊಡುವ ಬಗ್ಗೆ ತೀರ್ಮಾನಿಸಿದ್ದೇವೆ ಎಂದರು.
‘₹5 ಕೋಟಿ ವೆಚ್ಚದಲ್ಲಿ ಹೊಂಬಾಳಮ್ಮನಕೆರೆ ಅಭಿವೃದ್ಧಿಪಡಿಸುವೆ. ಗೌರಮ್ಮನಕೆರೆಯನ್ನು ಬಹಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದೇವೆ. ಪಟ್ಟಣವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುತ್ತೇನೆ’ ಎಂದು ಹೇಳಿದರು.
ತಾಲ್ಲೂಕು ಆಸ್ಪತ್ರೆಯಲ್ಲಿ ನೂತನ ಸ್ಕ್ಯಾನಿಂಗ್ ಯಂತ್ರಕ್ಕೆ ಚಾಲನೆ ನೀಡಲಾಯಿತು.
ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪಸಂದ್ರ ವೆಂಕಟೇಶ್, ಪ್ರಥಮ ದರ್ಜೆ ಗುತ್ತಿಗೆದಾರ ಕೆಂಪರಾಜು, ಪೋಲಿಸ್ ಇನ್‌ಸ್ಟೆಕ್ಟರ್ ಶ್ರೀನಿವಾಸ್, ಶೈಲಜಾ, ಜಯಮ್ಮ, ವೈದ್ಯರು ಹಾಗೂ ರಕ್ಷ ಸಮಿತಿ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.