ADVERTISEMENT

ಮಾಗಡಿ | ಖಾಸಗಿ ಕ್ಲಿನಿಕ್ ಬಂದ್ ಮಾಡಲು ಆದೇಶ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 5:33 IST
Last Updated 21 ನವೆಂಬರ್ 2025, 5:33 IST
ಮಾಗಡಿಯಲ್ಲಿ ತಾಲ್ಲೂಕು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಸಂಸ್ಥೆ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿದರು
ಮಾಗಡಿಯಲ್ಲಿ ತಾಲ್ಲೂಕು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಸಂಸ್ಥೆ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿದರು   

ಮಾಗಡಿ: ತಾಲ್ಲೂಕಿನ ಹೋಬಳಿ ಕೇಂದ್ರ ಮತ್ತು ಪಟ್ಟಣದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಕ್ಲಿನಿಕ್‌ಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾ.ಎನ್.ಕೆ.ಫಣೀಂದ್ರ ಅವರು ಮುಚ್ಚುವ ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ತಾಲ್ಲೂಕು ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಅಧ್ಯಕ್ಷ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಬಡವರು ಮತ್ತು ದುರ್ಬಲರನ್ನು ಬಂಡವಾಳಗೊಳಿಸಿಕೊಂಡು ಅನಧಿಕೃತವಾಗಿ ಅನೇಕ ಖಾಸಗಿ ಚಿಕಿತ್ಸಾ ಕೇಂದ್ರಗಳು ಸ್ಥಾಪಿತವಾಗಿದ್ದ ಸಂಗತಿಯನ್ನು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯದ ನಡುವೆ ಸಂಸ್ಥೆ ಪದಾಧಿಕಾರಿಗಳು ನೇರವಾಗಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಒಟ್ಟು 24 ಖಾಸಗಿ ಕ್ಲಿನಿಕ್‌ಗಳು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ದೂರಿನ ನಂತರ ಇವುಗಳಲ್ಲಿ 15 ಕ್ಲಿನಿಕ್‌ಗಳು ಪರವಾನಗಿ ಪಡೆದುಕೊಂಡರೆ, ಉಳಿದ 9 ಅನಧಿಕೃತ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಇದು ತಾಲ್ಲೂಕಿನಲ್ಲಿ ಅನಧಿಕೃತ ವೈದ್ಯಕೀಯ ಸೌಲಭ್ಯಗಳಿಗೆ ಪಾಠ ಕಲಿಸಿದಂತಾಗಿದೆ ಎಂದು ತಿಳಿಸಿದರು.

ADVERTISEMENT

ಸಂಸ್ಥೆ ಪದಾಧಿಕಾರಿಗಳಾದ ವೆಂಕಟೇಶ್, ರೂಪೇಶ್, ತೇಜಸ್, ಅನಿಲ್ ಕುಮಾರ್, ತಿರುಮಲೆ ಮಲ್ಲೇಶ್, ಅಂದಾನಿ, ಶರತ್, ಕಮಲಾಕರ್, ಲೋಕೇಶ್ ಮತ್ತು ಇತರರು ಸಭೆಯಲ್ಲಿ ಇದ್ದರು.

ಮಾಗಡಿ: ತಾಲ್ಲೂಕಿನ ಹೋಬಳಿ ಕೇಂದ್ರಗಳು ಸೇರಿದಂತೆ ಪಟ್ಟಣದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಕ್ಲಿನಿಕ್ ಗಳ ವಿರುದ್ಧ ಕಳೆದ ಐದು ವರ್ಷಗಳ ಹಿಂದೆ ಮಾನವ ಹಕ್ಕುಗಳ ಹಾಗು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮಾಗಡಿ ಘಟಕದ ವತಿಯಿಂದ ದೂರಿನ ಹಿನ್ನಲೆಯಲ್ಲಿ ಅನಧಿಕೃತ ಕ್ಲಿನಿಕ್ ಮುಚ್ಚಲು ಉಪಾ ಲೋಕಾಯುಕ್ತ ನ್ಯಾ.ಎನ್.ಕೆ.ಫಣೀಂದ್ರ ರವರು ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ತಾಲ್ಲೂಕು ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಅಧ್ಯಕ್ಷ ಎಂ.ಆರ್ ಮಂಜುನಾಥ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕೆಲ ವರ್ಷಗಳ ಹಿಂದೆ ಬಡವರು ಮತ್ತು ದುರ್ಬಲರನ್ನೇ ಬಂಡವಾಳ ಮಾಡಿಕೊಂಡು ಅನಧಿಕೃತವಾಗಿ ನಾಯಿಕೊಡೆಗಳಂತೆ ಖಾಸಗಿ ಚಿಕಿತ್ಸಾ ಕೇಂದ್ರಗಳು ತಲೆ ಎತ್ತಿರುವುದನ್ನು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣ ತಾಲ್ಲೂಕು‌ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು ಈಗ ಎಚ್ಚೆತ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲೋಕಾಯುಕ್ತಕ್ಕೆ ವರಧಿ ನೀಡಿದ್ದು ತಾಲ್ಲೂಕಿನಲ್ಲಿ ಒಟ್ಟು 24 ಖಾಸಗಿ ಕ್ಲಿನಿಕ್ ಗಳು ಯಾವುದೇ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದು ನಾವು ದೂರು ನೀಡಿದ ನಂತರ ಹದಿನೈದು ಕ್ಲಿನಿಕ್ ಗಳು ಪರವಾನಗಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದರೆ.
ಉಳಿದ 9 ಕ್ಲಿನಿಕ್ ಗಳು ಪರವಾನಗಿ ಪಡೆಯದೆ ಇದ್ದುದರಿಂದ ಅವುಗಳನ್ನು ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದು ತಾಲ್ಲೂಕಿನಲ್ಲಿ ಅನಧಿಕೃತ ಕ್ಲಿನಿಕ್ ಗಳಿಗೆ ಪಾಠ ಕಲಿಸಿದಂತಾಗಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಮುಕ್ತ ತಾಲ್ಲೂಕಾಗಿಸಲು ಪಣ : ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರು ಸಹ ಕೆಲ ಹೋಟೆಲ್ ಮತ್ತು ಇನ್ನಿತರ ಮಾರಟ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಕವರ್ ಸೇರಿದಂತೆ ಇತರ ವಸ್ತುಗಳನ್ನು ಯಾವುದೇ ಮುಲಾಜಿಲ್ಲದೇ ಮಾರಾಟ ಮತ್ತು ಬಳಕೆ ಮಾಡಿಕೊಳ್ಳಲಾಗುತ್ತಿದೆ ಇದರ ವಿರುದ್ಧ ತಾಲ್ಲೂಕು ಘಟಕ ಕಾರ್ಯಾಚರಣೆ ನಡೆಸಿ ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡಿ ಪ್ಲಾಸ್ಟಿಕ್ ನಿಂದ ಆಗುವ ಪರಿಣಾಮಗಳನ್ನು ತಪ್ಪಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಪದಾಧಿಕಾರಿಗಳಾದ ವೆಂಕಟೇಶ್, ರೂಪೇಶ್, ತೇಜಸ್, ಅನಿಲ್ ಕುಮಾರ್, ತಿರುಮಲೆ ಮಲ್ಲೇಶ್, ಅಂದಾನಿ, ಶರತ್, ಕಮಲಾಕರ್, ಲೋಕೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

9 ಅನಧಿಕೃತ ಕ್ಲಿನಿಕ್ ಬಂದ್
ಮಾಗಡಿ ತಾಲ್ಲೂಕಿನಲ್ಲಿ ಮುಚ್ಚಲಾಗಿರುವ ಕ್ಲಿನಿಕ್ ಪಟ್ಟಿ 1.ವಿನಾಯಕ ಕ್ಲಿನಿಕ್,
ರಾಮಮಂದಿರ ರಸ್ತೆ ಮಾಗಡಿ ಟೌನ್, 2. ಹೆಸರು ಇಲ್ಲಾ ಕ್ಲಿನಿಕ್ ಕಲ್ಯಾಗೇಟ್ ಎ.ಟಿ.ಎಂ ಪಕ್ಕ ಮಾಗಡಿ ಟೌನ್, 3. ಉದಯ್ ಕ್ಲಿನಿಕ್ ಕುದೂರು, 4. ಕಿರಣ್ ಕ್ಲಿನಿಕ್ ಕುದೂರು, 5.ಮಂಜುನಾಥ ಕ್ಲಿನಿಕ್, ಹೊಸಪೇಟೆ ಮಾಗಡಿ ಟೌನ್, 6 ಮೂಲವ್ಯಾದಿ ಚಿಕಿತ್ಸಾಲಯ ಹೊಸಪೇಟೆ ಮಾಗಡಿ ಟೌನ್, 7.ಶ್ರೀ ಕೃಷ್ಣ ಪ್ರಸಾದ್ ಕ್ಲಿನಿಕ್
ಅಗಲಕೋಟೆ, 8 ಎಸ್.ಎಲ್.ಎನ್. ಫಾರ್ಮ ನಾರಸಂದ್ರ, 9 ಹೋಮಿಯೋ ಪೈಲ್ಸ್ ಕ್ಲಿನಿಕ್ ಕಲ್ಯಾಗೇಟ್, ಮಾಗಡಿ ಟೌನ್ ಪ್ರಸ್ತುತ ಮುಚ್ಚಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.