ADVERTISEMENT

ಕುದೂರು | ಅಕ್ರಮ ಮದ್ಯ ವಶ: ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 6:25 IST
Last Updated 23 ಮಾರ್ಚ್ 2024, 6:25 IST

ಕುದೂರು: ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಗುರುವಾರ ಇಲ್ಲಿನ ಪೊಲೀಸರು ಬೇಧಿಸಿದ್ದಾರೆ. 

ಸೋಲೂರು ಹೋಬಳಿಯ ತುಪ್ಪದಹಳ್ಳಿ ನಿವಾಸಿ ವೆಂಕಟಸ್ವಾಮಿ ಮನೆಯ ಮೇಲೆ ದಾಳಿ ನಡೆಸಿದ ಸಬ್ ಇನ್‌ಸ್ಪೆಕ್ಟರ್ ಜಗದೀಶ್ ನಾಯಕ್ ಮತ್ತು ತಂಡ, ಮನೆಯ ಹಿಂದಿನ ಶೆಡ್‌ನಲ್ಲಿ ಅಕ್ರಮವಾಗಿ ಶೇಖರಿಸಿದ್ದ 5.13 ಲೀಟರ್ ಸಾಮರ್ಥ್ಯದ ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಂಡಿದೆ 

ಘಟನೆಯಲ್ಲಿ ವೆಂಕಟಸ್ವಾಮಿ ಪರಾರಿಯಾಗಿದ್ದಾನೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.