ADVERTISEMENT

ರಾಮನಗರ | ಇನ್‌ಸ್ಟಾಗ್ರಾಂನಲ್ಲಿ ಆನ್‌ಲೈನ್‌ ಕೆಲಸದ ಜಾಹೀರಾತು: ₹9.82 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 23:03 IST
Last Updated 10 ಆಗಸ್ಟ್ 2025, 23:03 IST
   

ರಾಮನಗರ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಆನ್‌ಲೈನ್‌ ಕೆಲಸದ ಜಾಹೀರಾತು ನಂಬಿದ ಕನಕಪುರ ತಾಲ್ಲೂಕಿನ ಮಹಿಳೆಯೊಬ್ಬರು, ವಂಚಕರ ಜಾಲಕ್ಕೆ ಸಿಲುಕಿ ₹9.82 ಲಕ್ಷ ಕಳೆದುಕೊಂಡಿದ್ದಾರೆ. ಜಾಹೀರಾತು ಮೇಲೆ ಕ್ಲಿಕ್ ಮಾಡಿದಾಗ, ಮಹಿಳೆಯ ಮೊಬೈಲ್‌ ಸಂಖ್ಯೆಯು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸ್ವಯಂಚಾಲಿತ ವಾಗಿ ಸೇರಿಕೊಂಡಿದೆ.

ಬಳಿಕ ವಂಚಕರು, ಆನ್‌ಲೈನ್‌ ಕೆಲಸಕ್ಕಾಗಿ ಟೆಲಿಗ್ರಾಂ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳಿಸಿದ್ದಾರೆ. ಮಹಿಳೆ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ನಂತರ, ಅವರ ಸಂಖ್ಯೆಯನ್ನು ಟೆಲಿಗ್ರಾಂ ಗ್ರೂಪ್‌ವೊಂದಕ್ಕೆ ಸೇರಿಸಿದ ವಂಚಕರು, ಮತ್ತೊಂದು ಲಿಂಕ್ ಕಳಿಸಿ, ಕ್ಲಿಕ್ ಮಾಡಲು ಹೇಳಿ ವಂಚಿಸಿದ್ದಾರೆ.

ಕಾಡಾನೆ ದಾಳಿ ಬೆಳೆ ನಾಶ
ರಾಮನಗರ: ತಾಲ್ಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಎರಡ್ಮೂರು ಕಾಡಾನೆಗಳು ಜಮೀನಿಗೆ ಲಗ್ಗೆ ಇಟ್ಟಿವೆ. ಇದರಿಂದಾಗಿ ಶಿವಯ್ಯ, ರೇಣುಕಾ ಹಾಗೂ ಶಿವರಾಜು ಎಂಬ ರೈತರಿಗೆ ಸೇರಿದ ಜಮೀನಿನಲ್ಲಿ ತೆಂಗಿನಮರ, ಪಪ್ಪಾಯ, ಹಲಸಿನಮರ, ನೀರಾವರಿ ಪರಿಕರಗಳು ನಾಶವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT