ADVERTISEMENT

ಮಲ್ಲಿಗೆ ಮೆಟ್ಟಿಲು ಸಂಘದ ಚುನಾವಣೆ ಜೆಡಿಎಸ್ ಬೆಂಬಲಿತರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 7:20 IST
Last Updated 7 ನವೆಂಬರ್ 2023, 7:20 IST
ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿ ಮಲ್ಲಿಗೆ ಮೆಟ್ಟಿಲು ಸಹಕಾರ ಸಂಘಕ್ಕೆ ಆಯ್ಕೆಯಾದ ನಿರ್ದೆಶಕರನ್ನು ಅಭಿನಂದಿಸಲಾಯಿತು
ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿ ಮಲ್ಲಿಗೆ ಮೆಟ್ಟಿಲು ಸಹಕಾರ ಸಂಘಕ್ಕೆ ಆಯ್ಕೆಯಾದ ನಿರ್ದೆಶಕರನ್ನು ಅಭಿನಂದಿಸಲಾಯಿತು   

ಹಾರೋಹಳ್ಳಿ: ಮಲ್ಲಿಗೆ ಮೆಟ್ಟಿಲು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಮೇಲುಗೈ ಸಾಧಿಸಿದರು.

12 ನಿರ್ದೇಶಕರ ಆಯ್ಕೆಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಚುನಾವಣೆ ನಡೆಯಿತು.  ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಆಯ್ಕೆಯಾದರು.

ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಎಂ.ಡಿ ಕುಮಾರ, ಕೆಂಪೇಗೌಡ ದಾಸೇಗೌಡ, ಶಿವಮಾದೇಗೌಡ ,ಬೋಜರಾಜ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸೋಮ ನಾಯಕ್, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಶಿವನಮ್ಮ, ಹಿಂದುಳಿದ ವರ್ಗ 'ಎ' ಮೀಸಲುನಿಂದ ಗೋವಿಂದರಾಜು, ಹಿಂದುಳಿದ ವರ್ಗ 'ಬಿ'ಇಂದ ನಾಗೇಶ್, ಮಹಿಳಾ ಮೀಸಲಿನಿಂದ ಗೌರಮ್ಮ ಸಿದ್ದರಾಜು, ಗೌರಮ್ಮ, ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಶ್ರೀಕಂಠಯ್ಯ ಆಯ್ಕೆಯಾದರು ಎಂದು ಚುನಾವಣೆ ರಿಟರ್ನಿಂಗ್ ಅಧಿಕಾರಿ ಮಂಜುನಾಥ್ ತಿಳಿಸಿದರು.

ADVERTISEMENT

ಆಯ್ಕೆಯಾದ ನಿರ್ದೇಶಕರಿಗೆ ಸ್ಥಳೀಯ ಮುಖಂಡರು ಅಭಿನಂದನೆ ಸಲ್ಲಿಸಿದರು. ಮುಖಂಡರಾದ ಶ್ರೀಕಂಠ, ಸಿದ್ದರಾಜು, ಶಿವರುದ್ರ, ತಮ್ಮಯಣ್ಣ ಗಣೇಶ್, ಬಸವರಾಜು, ಸತ್ಯ ಕುಮಾರ್, ಪುಟ್ಟಸ್ವಾಮಿ ಜೆಡಿಎಸ್ ಮುಖಂಡರು ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.