
ಹಾರೋಹಳ್ಳಿ: ಕನ್ನಡ ಸಾಹಿತ್ಯ ಪರಿಷತ್‌ನಿಂದ ರಾಷ್ಟ್ರಕವಿ ಕುವೆಂಪು ಅವರ 121ನೇ ಜಯಂತಿಯನ್ನು ತಾಲ್ಲೂಕಿನ ಕೊಟ್ಟಗಾಳು ಸಂಗಮ ಪ್ರೌಢಶಾಲೆ ಆವರಣದಲ್ಲಿ ಆಚರಿಸಲಾಯಿತು.
ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕರ್ನಾಟಕ ವಿಕಾಸ ರಂಗ ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ.ನಾರಾಯಣ್ ಮಾತನಾಡಿ, ಸಮಾಜದಲ್ಲಿ ವೈಚಾರಿಕೆ ಪ್ರಜ್ಞೆ ಮೂಡಿಸಿದ ಕುವೆಂಪು ಅಘಾದ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದರು. ‘ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ’ ಎನ್ನುವುದು ಸಾಹಿತ್ಯ ಕ್ಷೇತ್ರದಲ್ಲಿ ಜನಜನಿತ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, ಮಾನವನನ್ನು ವಿಶ್ವಮಾನವ ಮಾಡಬೇಕು ಎನ್ನುವುದು ಕುವೆಂಪು ಅವರ ಕನಸಾಗಿತ್ತು. ಕುವೆಂಪು ಒಬ್ಬ ರಾಷ್ಟ್ರ ಕವಿ ಅವರು ತಮ್ಮ ಆಲೋಚನೆಗಳನ್ನು ಸಾಹಿತ್ಯ ಹಾಗೂ ಕೃತಿಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ. ದುಂದುವೆಚ್ಚ ಮಾಡದೆ ಪ್ರಪಂಚಕ್ಕೆ ಮಂತ್ರ ಮಾಂಗಲ್ಯ ಪರಿಚಯಿಸಿದ್ದಾರೆ. ಕುವೆಂಪು ರಚಿಸಿದ ನಾಡಗೀತೆ ವಿಶ್ವಕ್ಕೆ ಮಾದರಿ ಎಂದು ಹೇಳಿದರು.
ಮುಖ್ಯಶಿಕ್ಷಕರಾದ ಟಿ.ವಿ.ಎನ್ ಪ್ರಸಾದ್, ಸಿ.ಗೋವಿಂದರಾಜು, ಶಂಕರ್‌ಮೂರ್ತಿ, ಗ್ರಂಥಪಾಲಕ ರಾಜೇಶ್, ನಾಗರಾಜು, ಪಿ.ಯು. ಕಾಲೇಜು ಆಡಳಿತ ಅಧಿಕಾರಿ ರಾಮಚಂದ್ರೇಗೌಡ, ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.