
ಕನಕಪುರ: ತುಂಗಣಿ ಮತ್ತು ಶಿವನಹಳ್ಳಿ ನಡುವಿನ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಹಲವು ಚಿಲ್ಲರೆ ಅಂಗಡಿಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಲಾಗಿದೆ.
ಬೈಪಾಸ್ ರಸ್ತೆಯ ತುಂಗಣಿ ಬಳಿ ಮೂರು ಅಂಗಡಿ, ಎಪಿಎಂಸಿ ಮಾರುಕಟ್ಟೆ, ಹೌಸಿಂಗ್ ಬೋರ್ಡ್ ಹಾಗೂ ಶಿವನಹಳ್ಳಿ ಬಳಿ ತಲಾ ಒಂದೊಂದು ಅಂಗಡಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.
ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗದಂತೆ ಮುಖ ಕಾಣದಂತೆ ಹೆಲ್ಮೆಟ್ ಧರಿಸಿದ್ದಾರೆ. ಸಿಸಿಟಿವಿಗಳನ್ನು ಬಟ್ಟೆಯಿಂದ ಮುಚ್ಚಲು ಪ್ರಯತ್ನಿಸಿದ್ದಾರೆ. ಇವೆಲ್ಲವೂ ಸಿಸಿಟಿವಿಗಳಲ್ಲಿ ಸೆರೆಯಾಗಿದೆ.
ಪಾನಬೀಡಾ ಅಂಗಡಿಯಲ್ಲಿ ವ್ಯಾಪಾರ ಮಾಡಿ ಇಟ್ಟಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.