
ಪ್ರಜಾವಾಣಿ ವಾರ್ತೆ
ಕನಕಪುರ: ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ. ಬೊಮ್ಮನಹಳ್ಳಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಮಳವಳ್ಳಿ ತಾಲ್ಲೂಕು ಉಲ್ಲಾಗಾಲ ಗ್ರಾಮದ ಮಧು (22) ಮೃತ ಯುವಕ.
ಬೊಮ್ಮನಹಳ್ಳಿಯ ತಮ್ಮ ದೊಡ್ಡಪ್ಪ ರಾಮಶೆಟ್ಟಿ ಅವರ ಮನೆಗೆ ಭೇಟಿ ನೀಡಿದ್ದರು. ಗ್ರಾಮಸ್ಥರು ಮೀನು ಹಿಡಿಯಲು ಹೋಗುವಾಗ ಅವರ ಜೊತೆಗೆ ಹೋಗಿದ್ದ ಮಧು, ಕೆರೆ ದಡದಲ್ಲಿ ಕುಳಿತಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಶೋಧನೆ ನಂತರ ಮೃತ ದೇಹವನ್ನು ಹೊರತೆಗೆಯಲಾಯಿತು. ಸಾತನೂರು ಪ್ರಕರಣ ದಾಖಲಾಗಿದೆ.
ಮೃತ ಮಧು ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡಿಕೊಂಡು ತಾಯಿಯೊಂದಿಗೆ ವಾಸವಾಗಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.