ADVERTISEMENT

ಕರ್ನಾಟಕ ಟೇಕ್ವಾಂಡೊ ಕಪ್ ಪಂದ್ಯಾವಳಿ; ರಾಮನಗರದ 18 ಮಂದಿಗೆ ಪದಕ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:13 IST
Last Updated 6 ಫೆಬ್ರುವರಿ 2026, 6:13 IST
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ‘ಕರ್ನಾಟಕ ಟೇಕ್ವಾಂಡೊ ಕಪ್: 2026’ ಪಂದ್ಯಾವಳಿಯಲ್ಲಿ 18 ಪದಕಗಳನ್ನು ಜಯಿಸಿದ ಬೆಂಗಳೂರು ದಕ್ಷಿಣ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕ್ರೀಡಾಪಟುಗಳು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಸಂಸ್ಥೆಯ ಉಪಾಧ್ಯಕ್ಷ ಮಾಸ್ಟರ್ ಎಂ. ಸತೀಶ್, ಪ್ರಧಾನ ಕಾರ್ಯದರ್ಶಿ ಮಾಸ್ಟರ್ ಗೋವಿಂದ್ ಇದ್ದಾರೆ
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ‘ಕರ್ನಾಟಕ ಟೇಕ್ವಾಂಡೊ ಕಪ್: 2026’ ಪಂದ್ಯಾವಳಿಯಲ್ಲಿ 18 ಪದಕಗಳನ್ನು ಜಯಿಸಿದ ಬೆಂಗಳೂರು ದಕ್ಷಿಣ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕ್ರೀಡಾಪಟುಗಳು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಸಂಸ್ಥೆಯ ಉಪಾಧ್ಯಕ್ಷ ಮಾಸ್ಟರ್ ಎಂ. ಸತೀಶ್, ಪ್ರಧಾನ ಕಾರ್ಯದರ್ಶಿ ಮಾಸ್ಟರ್ ಗೋವಿಂದ್ ಇದ್ದಾರೆ   

ರಾಮನಗರ: ರಾಜಧಾನಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ‘ಕರ್ನಾಟಕ ಟೇಕ್ವಾಂಡೊ ಕಪ್: 2026’ರ 8ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ದಕ್ಷಿಣ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಹಾಗೂ ಕಂಚು ಸೇರಿದಂತೆ ಒಟ್ಟು 18 ಪದಕಗಳನ್ನು ಗೆದ್ದಿದ್ದಾರೆ.

ಆರು ವರ್ಷದೊಳಗಿನ ಹೆಣ್ಣು ಮಕ್ಕಳ ಸಬ್ ಜೂನಿಯರ್ ಫೈಟ್ ವಿಭಾಗದಲ್ಲಿ ಈಷಿಕಾ , ಮೌನೇಶ, ಎಂಟು ವರ್ಷದ ವಿಭಾಗದಲ್ಲಿ ಗೌತಮಿ ಉಮೇಶ್, ಚರಿತ್ ಕುಮಾರ್ ಪಿ., ಶಾನ್ವಿ, ಮೋನಿಷ ಪರಿಣಿತ, ಹತ್ತು ವರ್ಷದ ವಿಭಾಗದಲ್ಲಿ ಫೈಸಲ್ ಹುಸೇನ್ ಹಾಗೂ ಪೂಮ್ಸೆ ಕೌಶಲ ಪ್ರದರ್ಶನ ವಿಭಾಗದಲ್ಲಿ ಎಂ. ಏಕತಾ ಚಿನ್ನದ ಪದಕ ಗಳಿಸಿದ್ದಾಳೆ.

ಆರು ವರ್ಷದ ಗಂಡು ಮಕ್ಕಳ ವಿಭಾಗದಲ್ಲಿ ಚರಿತ್, ವೈಭವ್, 14 ವರ್ಷದ ವಿಭಾಗದಲ್ಲಿ ರಿತೇಶ್ ಕುಮಾರ್ ಬೆಳ್ಳಿ, ಆದ್ಯ, ರಿತೇಶ್ ಆರ್. ಗೌಡ, ದೇವೇಗೌಡ, ವೈಭವ್, ಸಂಚಿತ್ ಶೇಖರ್ ಹಾಗೂ ಹರಿಪ್ರೀತ್ ಬೆಳ್ಳಿ ಪದಕ ಗೆದ್ದಿದ್ದಾರೆ. ಮೋಹಿತ್, ಯಶ್ವಿನ್ ನಾಯಕ್ ಹಾಗೂ ಧ್ರುವಂತ್ ಎಸ್.ಆರ್ ಪಟೇಲ್ ಕಂಚಿನ ಪದಕ ಜಯಿಸಿದ್ದಾರೆ.

ADVERTISEMENT

ಪದಕ ವಿಜೇತ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಅವರು, ರಾಮನಗರದಲ್ಲಿ ಅಭಿನಂದಿಸಿದರು. ಕ್ರೀಡಾಪಟುಗಳ ಪದಕ ಸಾಧನೆಗೆ ಬೆಂಗಳೂರು ದಕ್ಷಿಣ ಜಿಲ್ಲಾ ಟೇಕ್ವಾಂಡೊ ಸಂಸ್ಥೆ ಅಧ್ಯಕ್ಷ ಮಾಸ್ಟರ್ ಕೃಷ್ಣಮೂರ್ತಿ, ತರಬೇತುದಾರರಾದ ಸಂಸ್ಥೆ ಉಪಾಧ್ಯಕ್ಷ ಮಾಸ್ಟರ್ ಎಂ. ಸತೀಶ್, ಪ್ರಧಾನ ಕಾರ್ಯದರ್ಶಿ ಮಾಸ್ಟರ್ ಗೋವಿಂದ್ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.