ADVERTISEMENT

ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ತಾತ್ಕಾಲಿಕ ತಡೆ: ಅಭಿಮಾನಿಗಳ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:02 IST
Last Updated 26 ನವೆಂಬರ್ 2025, 5:02 IST
ಮಾಗಡಿ ಕೆಂಪೇಗೌಡ ಪ್ರತಿಮೆ ಸ್ಥಳಾಂತಕ್ಕೆ ತಾತ್ಕಾಲಿಕ ತಡೆ ಹಿನ್ನೆಲೆಯಲ್ಲಿ ಎಚ್.ಎಂ.ಕೃಷ್ಣಮೂರ್ತಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು
ಮಾಗಡಿ ಕೆಂಪೇಗೌಡ ಪ್ರತಿಮೆ ಸ್ಥಳಾಂತಕ್ಕೆ ತಾತ್ಕಾಲಿಕ ತಡೆ ಹಿನ್ನೆಲೆಯಲ್ಲಿ ಎಚ್.ಎಂ.ಕೃಷ್ಣಮೂರ್ತಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು   

ಮಾಗಡಿ: ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ₹40 ಕೋಟಿ ಬಂಡವಾಳದ ಆಸ್ಪತ್ರೆ ನಿರ್ಮಾಣದ ಹೆಸರಿನಲ್ಲಿ ಪ್ರತಿಮೆಯನ್ನು 100 ಮೀಟರ್ ದೂರ ಸ್ಥಳಾಂತರಿಸಲು ಯೋಜಿಸಲಾಗಿತ್ತು. ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿತ್ತು. ನ್ಯಾಯಾಲಯ ಆಸ್ಪತ್ರೆ ನಕ್ಷೆ ಮತ್ತು ಇತರ ದಾಖಲೆಗಳನ್ನು ಕೋರಿತ್ತು. ಅಧಿಕಾರಿಗಳು ಈ ದಾಖಲೆ ಸಲ್ಲಿಸದ ಕಾರಣ ನ್ಯಾಯಾಲಯವು ಫೈಲ್ ಪೆಂಡಿಂಗ್‌ಗೆ ಇಟ್ಟಿದೆ.

ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಾಗಡಿ ಇತಿಹಾಸ ಪ್ರಸಿದ್ಧ ಕೋಟೆ, ಕಂದಕ ಮತ್ತು ಪಳಯುಳಿಕೆ ರಕ್ಷಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಗೌರಮ್ಮನ ಕೆರೆ ಮತ್ತು ಹೊಂಬಾಳಮ್ಮನ ಕೆರೆ ಮುಚ್ಚಲಾಗುತ್ತಿದೆ. ಕೇವಲ 15 ವರ್ಷ ಹಳೆಯ ಅಂಬೇಡ್ಕರ್ ಭವನ ಕಾನೂನು ಬಾಹಿರವಾಗಿ ತೆರವುಗೊಳಿಸಲಾಗಿದೆ ಎಂದು ಆರೋಪಿಸಿದರು.

ಗುಮ್ಮಸಂದ್ರ ರುದ್ರಮುನೇಶ್ವರ ಮಠದ ಡಾ.ಚಂದ್ರಶೇಖರ ಸ್ವಾಮೀಜಿ, ಪ್ರತಿಮೆ ಉಳಿಸಿಕೊಂಡು ಆಸ್ಪತ್ರೆ ನಿರ್ಮಿಸುವಂತೆ ಮನವಿ ಮಾಡಿದರು.

ಚಕ್ರಭಾವಿ ಜಂಗಮ ಮಠದ ಸಿದ್ದಲಿಂಗ ಸ್ವಾಮೀಜಿ, ಪ್ರತಿಮೆ ಆವರಣವನ್ನು ಸುಂದರ ಉದ್ಯಾನವನ್ನಾಗಿ ಮಾಡುವಂತೆ ಸಲಹೆ ನೀಡಿದರು.

ಯುವ ಜೆಡಿಎಸ್ ಅಧ್ಯಕ್ಷ ವಿಜಯ್ ಕುಮಾರ್, ದಲಿತ ಮುಖಂಡ ಸಿ.ಜಯರಾಮು, ಮರೂರು ಸಾಗರ್ ಗೌಡ, ಎನ್‌ಇಎಸ್ ಆನಂದ್, ಶಿವರಾಮಯ್ಯ, ಗಂಗಾದರ್, ಮೋಹನ್, ಗೋಪಿ, ನಿವೃತ್ತ ಶಿಕ್ಷಕ ಕೆಂಪೇಗೌಡ, ಸಿದ್ದರಾಜು, ಮರೂರು ಶಂಕರಪ್ಪ, ರಂಗೇಶ್, ಸೈಯದ್, ಹೇಮಂತ್, ನರಸಿಂಹಮೂರ್ತಿ, ಗಂಗನರಸಿಂಹ ಇತರರು ಭಾಗವಹಿಸಿದ್ದರು.

ಮಾಗಡಿ ಪಟ್ಟಣದ ಕೆಂಪೇಗೌಡ ಪ್ರತಿಮೆಗೆ ಕ್ರೈನ್ ಮೂಲಕ ಕ್ಷೀರಾಭಿಷೇಕ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.