
ಮಾಗಡಿ: ನಗರದಲ್ಲಿ ಡಿ.25 ರಿಂದ 28ರ ವರೆಗೆ ಕೆಂಪೇಗೌಡ ಉತ್ಸವ ನಡೆಯಲಿದ್ದು, ನಾಲ್ಕು ದಿನ ವೈವಿಧ್ಯಮ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಪ್ರಗತಿಪರ ರೈತರು ಹಾಗೂ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು. ಪಕ್ಷಾತೀತವಾಗಿ ಉತ್ಸವ ನಡೆಯಲಿದೆ ಎಂದು ಬಮೂಲ್ ನಿರ್ದೇಶಕ ಎಚ್.ಎನ್. ಅಶೋಕ್ ಬುಧವಾರ ತಿಳಿಸಿದರು.
ಕ್ರಿಸ್ಮಸ್ ಹಬ್ಬದಂದು ಮಾಗಡಿಯಲ್ಲಿ ಕೆಂಪೇಗೌಡ ಉತ್ಸವ ಆರಂಭವಾಗಲಿದೆ. ಡಿ.25 ರಂದು ಪುರುಷರ ಮ್ಯಾರಥಾನ್ ಹಾಗೂ ಡಿ.26 ರಂದು ಮಹಿಳಾ ಮ್ಯಾರಥಾನ್ ನಡೆಯಲಿದ್ದು, ಒಟ್ಟು ಮೂರು ಸಾವಿರ ಮಂದಿ ಮ್ಯಾರಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಎನ್ಇಎಸ್ ವೃತ್ತದ ಗಾಂಧಿ ಪ್ರತಿಮೆ ಅನಾವರಣ, ದೇಹದಾಢ್ಯ ಸ್ಪರ್ಧೆ, ರಂಗೋಲಿ ಸ್ಪರ್ಧೆ,ವೇಷ ಭೂಷಣ ಸ್ಪರ್ಧೆ, ದಂಪತಿಗಳ ಫ್ಯಾಷನ್ ಷೊ, ಡಿ.27 ರಂದು ರಂಗೋಲಿ ಸ್ಪರ್ಧೆ, ಶ್ರೀನಿವಾಸ ಕಲ್ಯಾಣೋತ್ಸವ, ಡಿ 28.ರಂದು ಕೆಂಪೇಗೌಡ ಬಯಲು ರಂಗ ಮಂದಿರದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನ, ಸಂಜೆ ಕೋಟೆ ಮೈದಾನದಲ್ಲಿ ಲೈವ್ ಮ್ಯೂಸಿಕಲ್ ನೈಟ್, ಕಾಮಿಡಿ ದರ್ಬಾರ್, ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಜೆ.ಪಿ.ಚಂದ್ರೇಗೌಡ, ಅಗಲಕೋಟೆ ನರಸಿಂಹಮೂರ್ತಿ, ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಶೈಲಜಾ, ಕಸ್ತೂರಿ ಕಿರಣ್, ಡೂಮ್ ಲೈಟ್ ಮೂರ್ತಿ, ಮಂಜುನಾಥ್, ಬೈಚಾಪುರ ಕಿರಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.