ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳ ತಂಡ, ಸರ್ಕಾರಿ ಜಾಗದ ಒತ್ತುವರಿ ಗುರುತಿಸಿ ಕೆಂಪು ಬಾವುಟ ನೆಟ್ಟಿತು
ಬಿಡದಿ (ರಾಮನಗರ): ಕೇತಗಾನಹಳ್ಳಿ 5 ಸರ್ವೆ ನಂಬರ್‌ಗಳಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಕೈಗೊಂಡಿರುವ ಒತ್ತುವರಿ ಗಡಿ ಗುರುತಿಸುವಿಕೆ
ಕಾರ್ಯ ಬುಧವಾರವೂ ಮುಂದುವರಿಯಿತು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆ ಜಮೀನು ಇರುವ ಸರ್ವೆ ನಂಬರ್‌ಗಳಲ್ಲಿ ಮಂಗಳವಾರ ಒತ್ತುವರಿಯಾಗಿದ್ದ ಸರ್ಕಾರಿ ಜಾಗದ ಗಡಿ ಗುರುತಿಸಿದ್ದ ಅಧಿಕಾರಿಗಳು, ಉಳಿದ ಸರ್ವೆ ನಂಬರ್‌ಗಳಲ್ಲಿನ ಒತ್ತುವರಿ ಗುರುತಿಸಿದರು.
ಉಪ ತಹಶೀಲ್ದಾರ್ ಮಲ್ಲೇಶ್ ನೇತೃತ್ವದಲ್ಲಿ ಸ್ಥಳಕ್ಕೆ ಬೆಳಗ್ಗೆ ಬಂದ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳ ತಂಡವು, ಸರ್ವೆ ನಂಬರ್ 7, 8, 9, 10, 16, 16/32 ಹಾಗೂ 79ರಲ್ಲಿ ಸರ್ವೆ ವರದಿ ಆಧರಿಸಿ ಒತ್ತುವರಿಯಾಗಿರುವ ಸರ್ಕಾರಿ ಜಾಗದ ಗಡಿ ಗುರುತಿಸಿದರು. 10ರ ಸರ್ಕಾರಿ ಜಾಗದಲ್ಲಿರುವ ಸ್ಮಶಾನ, ಬಂಡಿ ದಾರಿ ಹಾಗೂ ಹಳ್ಳಗಳನ್ನು ಗುರುತಿಸಿ ಕೆಂಪು ಬಾವುಟ ನೆಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.