ADVERTISEMENT

ರಿಲಯನ್ಸ್‌ ಜೊತೆ ನಂದಿನಿ ವಿಲೀನಕ್ಕೆ ಯತ್ನ: ಕೆಎಂಎಫ್‌ ಮಾಜಿ ಅಧ್ಯಕ್ಷ ಪಿ. ನಾಗರಾಜು

​ಪ್ರಜಾವಾಣಿ ವಾರ್ತೆ
Published 9 ಮೇ 2023, 2:42 IST
Last Updated 9 ಮೇ 2023, 2:42 IST
ನಂದಿನಿ
ನಂದಿನಿ    

ರಾಮನಗರ: ಡೇರಿ ಉದ್ಯಮಕ್ಕೆ ಕಾಲಿಡಲು ರಿಲಯನ್ಸ್‌ ಉತ್ಸುಕವಾಗಿದ್ದು, 2027ರ ವೇಳೆಗೆ ಅಮೂಲ್‌ ಮತ್ತು ನಂದಿನಿ ರಿಲಯನ್ಸ್‌ ಜೊತೆ ಒಗ್ಗೂಡ ಬಹುದು ಎಂದು ಕೆಎಂಎಫ್‌ ಮಾಜಿ ಅಧ್ಯಕ್ಷ ಪಿ. ನಾಗರಾಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಈಗಾಗಲೇ ಅಮೂಲ್ ರಿಲಯನ್ಸ್‌ನೊಂದಿಗೆ ಸಹಭಾಗಿತ್ವ ಹೊಂದಿದೆ. ನಂದಿನಿ ಮತ್ತು ಅಮೂಲ್‌ ಎರಡರ ವಾರ್ಷಿಕ ವಹಿವಾಟು ₹13 ಲಕ್ಷ ಕೋಟಿ ದಾಟಿದೆ. ಇದು 2027ಕ್ಕೆ ₹37 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ.

ಜಿಲ್ಲೆಯಲ್ಲಿ ಬಹುಕೋಟಿ ವೆಚ್ಚದಲ್ಲಿ ಶಿವನಹಳ್ಳಿ ಮತ್ತು ರಾಮನಗರದ ಕಣ್ವ ಬಳಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಹಕಾರ ನೀಡಿದ್ದರು. ಹೈನುಗಾರರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ₹5 ರಿಂದ 7ಕ್ಕೆ ಹೆಚ್ಚಿಸುವುದಾಗಿ ಕಾಂಗ್ರೆಸ್‌ ಈಗಾಗಲೇ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಹೀಗಾಗಿ ಹೈನುಗಾರರು ಕಾಂಗ್ರೆಸ್‍ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.