
ಕನಕಪುರ: ಇಲ್ಲಿನ ನಾರಾಯಣಪ್ಪನ ಕೆರೆ ಬಳಿ ಇರುವ ಕೆಪಿಎಸ್ ಮೆಮೋರಿಯಲ್ ಮಲ್ಟಿ ಪರ್ಪಸ್ ಎಜುಕೇಷನಲ್ ಟ್ರಸ್ಟ್‌ನ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ ವತಿಯಿಂದ ಶನಿವಾರ ಕೆಪಿಎಸ್ಎಂ ಉತ್ಸವ 2026 ಪುಟ್ಟ ಮಕ್ಕಳ ಕಲರವದೊಂದಿಗೆ ಯಶಸ್ವಿಯಾಗಿ ನಡೆಯಿತು.
ಖಾಸಗಿ ಶಾಲೆ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ್.ಎಸ್ ಉದ್ಘಾಟಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಮೊದಲಿನಷ್ಟು ಸುಲಭವಾಗಿಲ್ಲ. ಅದರ ನಿರ್ವಹಣೆ ಇಂದು ಹೆಚ್ಚು ಕಿಷ್ಟಕರವಾಗಿದೆ. ಶಿಕ್ಷಣ ಸಂಸ್ಥೆಗಳ ಮೇಲೆ ಹೆಚ್ಚು ಜವಾಬ್ದಾರಿ ಮತ್ತು ಹೆಚ್ಚು ಹೊಣೆಗಾರಿಕೆಯಿದೆ ಎಂದು ತಿಳಿಸಿದರು.
ಶಾಲೆಗಳು ಕೇವಲ ಶಿಕ್ಷಣ ನೀಡುವ ಸಂಸ್ಥೆಗಳಾಗದೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡಗೆಯಾಗಿ ಕೊಡುವ ಜ್ಞಾನ ದೇಗುಲ ಆಗಬೇಕು. ಆ ಜವಾಬ್ದಾರಿಯಿಂದ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಪೋಷಕರು ಶಿಕ್ಷಣ ಸಂಸ್ಥೆಗಳ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಬಹುಮುಖ ಪ್ರತಿಭೆಯೊಂದಿಗೆ ಸಜ್ಜುಗೊಳಿಸಬೇಕೆಂದು ಸಲಹೆ ನೀಡಿದರು.
ಮಕ್ಕಳ ಉತ್ತಮ ಭವಿಷ್ಯ ಮತ್ತು ಉತ್ತಮ ಸಂಸ್ಕಾರಕ್ಕೆ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪೋಷಕರ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಶಾಲೆ ಇರಲಿ ಮನೆ ಇರಲಿ ಉತ್ತಮ ವಾತಾವರಣವಿರಬೇಕು. ಆಗ ಮಾತ್ರ ಮಕ್ಕಳು ಉತ್ತಮ ಸಂಸ್ಕಾರವಾಂತರಾಗಲು ಸಾಧ್ಯ ಎಂದರು.
ಮಕ್ಕಳು ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದೊಂದಿಗೆ ಉತ್ತಮ ಮನರಂಜನೆ ನೀಡಿದರು. ಲಕ್ಕಿ ಪೇರೆಂಟ್ಸ್ ಸ್ಪರ್ಧೆ ನಡೆಸಿ ವಿಜೇತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಮೊದಲನೇ ಬ್ಯಾಚ್ ಆಗಿ ಹತ್ತನೇ ತರಗತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ಡಾ.ಕೆ.ಎಂ.ಸೌಗಂಧ ಗಣೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಿಕ್ಷಣ ಇಲಾಖೆ ಸಿಆರ್‌ಪಿ ರಮೇಶ್, ಸಂಸ್ಥೆ ಟ್ರಸ್ಟಿಗಳಾದ ಕೆ.ಎಸ್.ನಾಗಲಿಂಗ ಪ್ರಶಾಂತ್, ಕೆ.ಎಂ.ಸನಂದ ಗಣೇಶ್, ಮುರಳಿಧರ್ ಸಿಂಗ್, ಕಾಲೇಜ್ ಆಫ್ ಫಾರ್ಮಾಸಿ ಪ್ರಾಂಶುಪಾಲ ಶ್ರೇಯಸ್ ಶೆಟ್ಟಿ, ಕೆಪಿಎಸ್ಎಂ ಪ್ರೌಢಶಾಲೆ ಪ್ರಾಂಶುಪಾಲರಾದ ಯಾಸ್ಮಿನ್, ಸಂಸ್ಥೆ ಆಡಳಿತ ಅಧಿಕಾರಿ ನರಸಿಂಹಮೂರ್ತಿ ಸೇರಿದಂತೆ ಶಾಲೆಯ ಶಿಕ್ಷಕರ, ಸಿಬ್ಬಂದಿಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.