
ಹಾರೋಹಳ್ಳಿ: ಕಟ್ಟಕಡೆಯ ಹಳ್ಳಿಗಳಿಗೂ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ದಿನ ಬೊಬ್ಬಿಡುತ್ತಿದ್ದು ಆದರೆ ಕೃಷ್ಣಭೋವಿ ದೊಡ್ಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯವಿಲ್ಲದಿರುವುದು ದುರಷ್ಟರಕರ ಸಂಗತಿಯಾಗಿದೆ.
ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಕೃಷ್ಣಭೋವಿ ದೊಡ್ಡಿ ಸುಮಾರು 80ಕ್ಕೂ ಹೆಚ್ಚು ಕುಟುಂಬಗಳು 500ಕೂ ಹೆಚ್ಚು ಜನ ವಾಸವಿದ್ದು ಗ್ರಾಮದಲ್ಲಿ ಇದುವರೆಗೂ ರಸ್ತೆ ಹಾಗೂ ಚರಂಡಿ ನಿರ್ವಹಣೆ ಸೇರಿದಂತೆ ಬಹುತೇಕ ಯಾವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳ ಜನ ಪ್ರತಿನಿಧಿಗಳು ಬಗೆಹರಿಸುವ ಕೆಲಸ ಮಾಡಿಲ್ಲ,
ಸರಿಯಾದ ರಸ್ತೆಯಿಲ್ಲ:ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಇದುವರೆಗೂ ರಸ್ತೆ ನಿರ್ಮಾಣ ಮಾಡಿಲ್ಲ ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಈ ಗ್ರಾಮದ ರಸ್ತೆ ಸಂಪರ್ಕ ಸೇರಿದಂತೆ ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿರುವುದು ದುರಂತವೇನಿಸುವುದು.
ಮಳೆಗಾಲದಲ್ಲಿ ತೊಂದರೆ:ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ತುಂಬಿ ಹರಿಯುವುದರಿಂದ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಮಳೆಗಾಲದಲ್ಲಿ ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರೂ ನಡೆದಾಡಲು ತೊಂದರೆ ಅನುಭವಿಸರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುವರು.
ಚರಂಡಿಗಳೇ ಇಲ್ಲ: ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಿಲ್ಲ ಗ್ರಾಮ ವಾಸಿಗಳು ಹಲವಾರು ಬಾರಿ ಚರಂಡಿ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆಗೆ ಪರಿಹಾರ ಸಿಗದೆ ಸಮಸ್ಯೆ ಹೆಚ್ಚಾಗಿ ಚರಂಡಿ ನೀರು ನಿಂತ ಕಡೆಯೇ ನಿಂತು ದುರ್ವಾಸನೆ ಹೊಡೆದು ನಾನಾ ಖಾಯಿಲೆ ಉದ್ಬವಿಸುತ್ತಿರುವುದು ಕಂಡುಬರುತ್ತಿವೆ.ಚುನಾವಣೆ ಸಮಯದಲ್ಲಿ ಮತಯಾಚನೆಗೆ ಬರುವಂತಹ ಜನಪ್ರತಿನಿಧಿಗಳು ನಂತರದ ದಿನಗಳಲ್ಲಿ ಗ್ರಾಮದ ಸಮಸ್ಯೆ ಬಗ್ಗೆ ಕಿಂಚಿತ್ತೂ ಯೋಚಿಸದೇ, ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಅವರ ಇಚ್ಚಾಶಕ್ತಿಯ ಕೊರತೆಯಿಂದ ಗ್ರಾಮದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚು ಉಲ್ಬಣಗೊಳ್ಳುತ್ತಿದೆ.
ಸ್ವಚ್ಛತೆ ಇಲ್ಲ: ಗ್ರಾಮದಲ್ಲಿ ಸೂಕ್ತ ರೀತಿಯ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿ ನೀರು ಎಲ್ಲಂದರಲ್ಲಿ ನಿಂತು ಗಂಬುವಾಸನೆ ಬೀರುತ್ತಿದೆ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ನೀರಿಗೆ ಪರದಾಟ:ಮಹಿಳೆಯರು ಹನಿ ನೀರಿಗಾಗಿ ಇಂದಿಗೂ ಪರದಾಡುತ್ತಿದ್ದು ಖಾಸಗೀಯವರ ತೋಟ ಇನ್ನಿತರೆ ಪ್ರದೇಶಗಳಿಗೆ ತಿರುಗಿ ಕುಡಿಯುವ ನೀರನ್ನು ಶೇಖರಣೆ ಮಾಡುತ್ತಿದ್ದಾರೆ. ಒಂದು ನೆಲ್ಲಿಯಲ್ಲಿ ನೀರನ್ನು ಹಿಡಿದುಕೊಳ್ಳಬೇಕಾದರೆ ಗ್ರಾಮದ ಇತರೆ ಮಹಿಳೆಯರ ಮೇಲೆ ಜಗಳ ಅನಿವಾರ್ಯ ಎಂಬAತೆ ಇಲ್ಲಿನ ಪರಿಸ್ಥಿತಿ ಇದ್ದು, ಶುಧ್ಧ ಕುಡಿಯುವ ನೀರಂತೂ ಇಲ್ಲಿನ ಜನತೆಗೆ ಮರೀಚಿಕೆಯಾಗಿಯೇ ಉಳಿದಿದೆ.
ಶೌಚಾಯಲಗಳಿಲ್ಲ:ಇನ್ನು ಗ್ರಾಮದಲ್ಲಿ 80ಕ್ಕೂ ಹೆಚ್ಚು ಮನಗಳಿವೆ ಆ ಮನೆಗಳಲ್ಲಿ 500ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಜಿಲ್ಲೆಯನ್ನು ಬಯಲು ಮುಕ್ತ ಜಿಲ್ಲೆಯನ್ನಾಗಿ ಮಾಡಿಬಿಟ್ಟಿದ್ದೇವೆ ಎಂದು ಅಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಿ ಬೀಗುತ್ತಿದ್ದಾರೆ. ಆದರೆ ಈ ಗ್ರಾಮದಲ್ಲಿ ಬಹುತೇಕ ಹಲವು ಮಂದಿ ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಕೇವಲ ಪ್ರಭಲ ವ್ಯಕ್ತಿಗಳಷ್ಟೇ ಇಲ್ಲಿ ಶೌಚಾಲಯ ಬಳಸುತ್ತಿದ್ದು, ಇಲ್ಲಿನ ವ್ಯವಸ್ಥೆ ತಾಲೂಕು ಆಡಳಿತದ ಆಡಳಿತವನ್ನು ಅಣಕಿಸುತ್ತಿದೆ.
ಸಾರಿಗೆ ವ್ಯವಸ್ಥೆ ಇಲ್ಲ: ಕೃಷ್ಣಭೋವಿ ದೊಡ್ಡಿ ಗ್ರಾಮಕ್ಕೆ ಸೂಕ್ತ ರೀತಿಯ ಸಾರಿಗೆ ವ್ಯವಸ್ಥೆ ಇಲ್ಲ. ರಸ್ತೆ ಹದಗೆಟ್ಟಿರುವುದರಿಂದ ಬಸ್ ಗಳು ಇದುವರೆಗೂ ಗ್ರಾಮದಲ್ಲಿ ಸಂಚಾರ ಮಾಡಿಲ್ಲ ನಾನಾ ಕೆಲಸ ಕಾರ್ಯಗಳಿಗೆ ವಿವಿಧ ಕಡೆ ಹೋಗುವವರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
ರಾಮನಗರ ವಿಧಾನಸಭಾ ಕ್ಷೇತ್ರವು ಘಟಾನುಘಟಿಗಳು ಆಳ್ವಿಕೆ ನಡೆಸಿದ ಕ್ಷೇತ್ರ ಮೂರು ಮುಖ್ಯಂಮತ್ರಿಗಳನ್ನು ನಾಡಿಗೆ ನೀಡಿದ ಕ್ಷೇತ್ರ ಹೆಚ್,ಡಿದೇವೇಗೌಡ,ಹೆಚ್.ಡಿ ಕುಮಾರಸ್ವಾಮಿ,ಪಿಜಿಆರ್ ಸಿಂಧ್ಯಾ,ಅನಿತಾ ಕುಮಾರಸ್ವಾಮಿ ಇದೀಗ ಹಾಲಿ ಶಾಸಕರಾಗಿರುವ ಇಕ್ಬಾಲ್ ಹುಸೇನ್ ಅವರು ಆಡಳಿತ ನಡೆಸಿದ ಕ್ಷೇತ್ರ ಹೀದಿದ್ದರೂ ಇಲ್ಲಿನ ಜನತೆಯ ಬದುಕು ಮಾತ್ರ ಬಲಾಗಲೇ ಇಲ್ಲ. ಗ್ರಾಮದಲ್ಲಿನ ಸಮಸ್ಯೆಯ ಬಗ್ಗೆ ಇಲ್ಲನ ಗ್ರಾಮಸ್ಥರು ಕಂಡಕAಡವರಿಗೆ ಮನವಿ ನೀಡಿದ್ದಾರೆ. ಆಮನವಿಗಳು ಇಂದಿಗೂ ಮನವಿಗಳಾಗಿಯೇ ಉಳಿದಿದ್ದು ಗ್ರಾಮಸ್ಥರಿಗೆ ಯಾವುದೇ ರೀತಿಯ ಸೌಲಭ್ಯಗಳು ಮಾತ್ರ ದಕ್ಕಿಲ್ಲ ಇನ್ನಾದರೂ ಕ್ಷೇತ್ರದ ಶಾಸಕರು ಇತ್ತ ಗಮನಹರಿಸಿ ಮೂಲಭೂತ ಸೌಲಭ್ಯವನ್ನು ಒದಗಿಸುವ ಕೆಲಸ ಮಾಡಬೇಕಿದೆ.
ಗ್ರಾಮದಲ್ಲಿ ಬಹುತೇಕ ಹಿಂದುಳಿದ ವರ್ಗದ ಜನತೆಯೇ ವಾಸಿಸುತ್ತಿದ್ದು ಧ್ವನಿ ಇಲ್ಲದ ಜನತೆಗೆ ಧ್ವನಿಯಾಗಬೇಕಾದ್ದು ನಮ್ಮ ಆಡಳಿತದ ಕರ್ತವ್ಯ ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳೇ ಮರೀಚಿಕೆಯಾಗಿದೆರಾಮಕೃಷ್ಣ ಕೃಷ್ಣಭೋವಿದೊಡ್ಡಿ ಗ್ರಾಮಸ್ಥ
ನಾವು ಎಷ್ಟೇ ಮನವಿ ಮಾಡಿದರು ನಮಗೆ ಯಾವುದೇ ರೀತಿಯ ಸೌಲಭ್ಯ ನೀಡುತ್ತಿಲ್ಲ, ಅಲ್ಲದೇ ಕಾಂಕ್ರೀಟ್ ರಸ್ತೆಗಾಗಿ ಮಂಜೂರಾದ ಕಾಮಗಾರಿಯನ್ನು ಗ್ರಾಮದಲ್ಲಿ ನಡೆಸದೆ ಕಾಡುದಾರಿಯಲ್ಲಿ ಕಾಮಗಾರಿ ನಡೆಸುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ .ಗೋವಿಂದಯ್ಯ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.